ಬದಿಯಡ್ಕ: ಕ್ಯಾಂಪ್ಕೋ ನಿಯಮಿತ ಮಂಗಳೂರು ಇದರ "ಸಾಂತ್ವನ" ಯೋಜನೆಯಡಿ ಪಝಂಜಿ ಶಾಖೆಯ ಸಕ್ರಿಯ ಸದಸ್ಯ ಹಂಸ ಕೆ. ಎ, ಕಯುಂಗಿಲ್, ಹಜಿಯಾರುಪಡಿ, ಇವರ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಯ ವೆಚ್ಚದ ಪರಿಹಾರವಾಗಿ ಮಂಜೂರಾದ ಸಹಾಯ ಧನ ರೂ 50,000- ಮೊತ್ತವನ್ನು ಕ್ಕ್ಯಾಂಪ್ಕೋ ಸಂಸ್ಥೆಯ ಪ್ರಾದೇಶಿಕ ವಲಯದ ವ್ಯವಸ್ಥಾಪಕ ಚಂದ್ರ ಎಂ. ಗುರುವಾರ ಪಝಂಜಿ ಶಾಖೆಯಲ್ಲಿ ಹಸ್ತಾಂತರಿಸಿದರು. ಕ್ಯಾಂಪ್ಕೋ ತ್ರಿಶೂರು ವಲಯದ ಶಾಖಾ ವ್ಯವಸ್ಥಾಪಕ ಅನೀಶ್ ಕುಮಾರ್ ಕೆ, ಕ್ಯಾಂಪ್ಕೋ ಪಝಂಜಿ ಶಾಖೆಯ ವ್ಯವಸ್ಥಾಪಕ ಯತೀಶ್ ಕುಮಾರ್ ಕೆ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

.jpg)
