ಉಪ್ಪಳ: ಉಪ್ಪಳದಲ್ಲಿ ಆಯುರ್ವೇದ ಔಷಧದಂಗಡಿಗೆ ನುಗ್ಗಿ ಅದರ ಮಾಲಿಕಗೆ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಮೂರು ಮಂದಿ ವಿರುದ್ಧ ಮಂಜೇಶ್ವರ ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಉಪ್ಪಳ ರೈಲ್ವೇ ನಿಲ್ದಾಣ ಸಮೀಪ ಚಟುವಟಿಕೆ ನಡೆಸುತ್ತಿರುವ ವೈದ್ಯಶಾಲೆಯೊಂದರ ಮಾಲಿಕ, ಕಯ್ಯಾರು ಕುಂಡಚ್ಚಕಟ್ಟೆ ಬೀಡು ನಿವಾಸಿ ರವಿಚಂದ್ರ ಕೆ. ನೀಡಿದ ದೂರಿನನ್ವಯ ಉಪ್ಪಳ ನಿವಾಸಿ ಸವಾದ್ ಸೇರಿದಂತೆ 3 ಮಂದಿ ವಿರುದ್ಧ ಈ ಕೇಸು. ವೈದ್ಯಶಾಲೆ ಸಮೀಪ ನಿಲ್ಲಿಸಿದ್ದ ರವಿಚಂದ್ರ ಅವರ ಕಾರಿನ ಬಳಿ ಸಂಶಯಾಸ್ಪದ ರೀತಿಯಲ್ಲಿ ಸುತ್ತಾಡುತ್ತಿದ್ದವರ ಫೆÇೀಟೋ ತೆಗೆದ ದ್ವೇಷದಿಂದ, ಆರೋಪಿಗಳು ವೈದ್ಯಶಾಲೆಗೆ ನುಗ್ಗಿ ರವಿಚಂದ್ರರಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆಗೈದರುದಾಗಿ ದೂರಲಾಗಿದೆ.

