ಬದಿಯಡ್ಕ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ನೀರ್ಚಾಲು ಘಟಕದ ದೈವಾರ್ಷಿಕ ಮಹಾಸಭೆ ನೀರ್ಚಾಲು ವ್ಯಾಪಾರ ಭವನದಲ್ಲಿ ನಡೆಯಿತು. ಘಟಕದ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾಧ್ಯಕ್ಷ ಅಹ್ಮದ್ ಶರೀಫ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಕೆ.ಎಂ.ಸಜಿ, ಜಿಲ್ಲಾ ಕಾರ್ಯದರ್ಶಿ ದಾಮೋದರನ್ ಕುತ್ತಿಕೋಲ್, ಬದಿಯಡ್ಕ ವಲಯ ಸಂಚಾಲಕ ಕುಂಜಾರ್ ಮೊಹಮ್ಮದ್ ಮುಂತಾದವರು ಭಾಗವಹಿಸಿದ್ದರು. 2026-28ನೇ ವರ್ಷಕ್ಕೆ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸುಬ್ರಮಣ್ಯ ಭಟ್ ಎಂ, ಪ್ರಧಾನ ಕಾರ್ಯದರ್ಶಿಯಾಗಿ ರವಿ ನೀರ್ಚಾಲು, ಕೋಶಾಧಿಕಾರಿಯಾಗಿ ಥಾಮಸ್ ಡಿಸೋಜ ಇವರನ್ನು ಆಯ್ಕೆ ಮಾಡಲಾಯಿತು. ಮಹೇಶ್ ವಳಕ್ಕುಂಜ ವಂದಿಸಿದರು.

-%20Subrahmanya%20Bhat-side.jpg)
