ಬದಿಯಡ್ಕ: ಬಾಲಗೋಕುಲ ಉತ್ತರ ಕೇರಳ ರಾಜ್ಯ ಸಮ್ಮೇಳನದ ಪೂರ್ವಭಾವಿಯಾಗಿ ಬದಿಯಡ್ಕ ತಾಲೂಕು ಸಮನ್ವಯ ಸಮಿತಿ ಸಭೆ ಬುಧವಾರ ಬದಿಯಡ್ಕ ಶ್ರೀ ಗಣೇಶಮಂದಿರದಲ್ಲಿ ಜರಗಿತು. ಕಾರ್ಯಾಧ್ಯಕ್ಷ ನಿವೃತ್ತ ಪೊಲೀಸ್ ಅಧಿಕಾರಿ ಹರಿಶ್ಚಂದ್ರ ನಾಯ್ಕ್ ಮಾಹಿತಿಯನ್ನು ನೀಡುತ್ತಾ ರಾಜ್ಯ ಸಮ್ಮೇಳನದ ಯಶಸ್ಸಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ನಮ್ಮ ಧಾರ್ಮಿಕ ಪರಂಪರೆಯ ಭದ್ರವಾದ ಅಡಿಪಾಯಕ್ಕೆ ಪಣತೊಡಬೇಕು ಎಂದರು.
ಸ್ವಾಗತ ಸಮಿತಿ ಅಧ್ಯಕ್ಷ ಸಿ. ವಿ. ಪೊದುವಾಳ್, ಜಿಲ್ಲಾಧ್ಯಕ್ಷ ದಿನೇಶ್ ಮಾಸ್ತರ್ ಕೆಡೆಂಜಿ, ಜಿಲ್ಲಾ ಕಾರ್ಯದರ್ಶಿ ರಾಜೇಂದ್ರ ಮವ್ವಾರು, ಜಿಲ್ಲಾ ಕೋಶಾಧಿಕಾರಿ ನಟರಾಜ ಕಲ್ಲಕಳಂಬಿ, ರಕ್ಷಾಧಿಕಾರಿ ಜಯರಾಮ ಚೆಟ್ಟಿಯಾರ್ ಬದಿಯಡ್ಕ ಉಪಸ್ಥಿತರಿದ್ದು ಮಾತನಾಡಿದರು. ತಾಲೂಕು ಅಧ್ಯಕ್ಷ ರಮೇಶ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕಾರ್ಯದರ್ಶಿ ಪ್ರೇಮಲತಾ ಸ್ವಾಗತಿಸಿ, ತಾಲೂಕು ಸಮನ್ವಯ ಸಮಿತಿಯ ಸಂಚಾಲಕ ಗಣೇಶ್ ಬಿ. ವಂದಿಸಿದರು.

.jpg)
