HEALTH TIPS

ಗುಪ್ತಚರ ಇಲಾಖೆ ನೂತನ ಮುಖ್ಯಸ್ಥರಾಗಿ ಮಹೇಶ್ ದೀಕ್ಷಿತ್ ನೇಮಕ

 ನವದೆಹಲಿ: ಗುಪ್ತಚರ ಇಲಾಖೆ(ಇಂಟೆಲಿಜೆನ್ಸ್‌ ಬ್ಯೂರೊ) ನೂತನ ಮುಖ್ಯಸ್ಥರಾಗಿ ಹಿರಿಯ ಐಪಿಎಸ್‌ ಅಧಿಕಾರಿ ಮಹೇಶ್ ದೀಕ್ಷಿತ್ ಅವರನ್ನು ನೇಮಕ ಮಾಡಲಾಗಿದೆ.


ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸಂಪುಟದ ನೇಮಕಾತಿ ಸಮಿತಿಯು (ಎಸಿಸಿ) ದೀಕ್ಷಿತ್ ಅವರ ನೇಮಕಾತಿಗೆ ಅನುಮೋದನೆ ನೀಡಿದೆ.

ಮುಂದಿನ 2 ವರ್ಷಗಳ ಅವಧಿಗೆ ಅವರು ಈ ಹುದ್ದೆಯಲ್ಲಿ ಇರಲಿದ್ದಾರೆ.

ಆಂಧ್ರಪ್ರದೇಶ ಕೆಡರ್‌ನ ದೀಕ್ಷಿತ್ 1993ರ ಬ್ಯಾಚ್‌ನ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿಯಾಗಿ. ಈ ಹುದ್ದೆಗೆ ಬಡ್ತಿ ಪಡೆಯುವ ಮುನ್ನ ಅವರು ಗುಪ್ತಚರ ಇಲಾಖೆಯಲ್ಲಿ ವಿಶೇಷ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.‌

ದೆಹಲಿಯ ಕೆಂಪು ಕೋಟೆ ಬಳಿ ನಡೆದ ಕಾರು ಸ್ಪೋಟಕ್ಕೆ ಸಂಬಂಧಿಸಿದಂತೆ 'ವೈಟ್ ಕಾಲರ್' ಭಯೋತ್ಪಾದನಾ ಜಾಲವನ್ನು ಭೇದಿಸುವಲ್ಲಿ ದೀಕ್ಷಿತ್ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಈಗಿನ ಮುಖ್ಯಸ್ಥ ತಪನ್ ಕುಮಾರ್ ದೇಕಾ ಅವರ ಅಧಿಕಾರವಧಿ ಇದೇ ಜೂನ್‌ 30ಕ್ಕೆ ಮುಕ್ತಾಯವಾಗಲಿದೆ. ದೇಕಾ ಅವರನ್ನು ಜೂನ್ 2022 ರಲ್ಲಿ ಎರಡು ವರ್ಷಗಳ ಅವಧಿಗೆ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. ಅವರ ಅಧಿಕಾರಾವಧಿಯನ್ನು 2024 ಮತ್ತು 2025 ರಲ್ಲಿ ಎರಡು ಬಾರಿ ವಿಸ್ತರಿಸಲಾಗಿತ್ತು.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries