ನವದೆಹಲಿ: ಸಮಾನವಾಗಿ ನ್ಯಾಯದಾನ ಕೈಗೆಟುಕುವಂತಾಗುವುದೇ ನಿಜವಾದ ಸಮಾನತೆ ಸಾಧಿಸುವುದರ ಬುನಾದಿ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಹೇಳಿದ್ದಾರೆ.
ರಷ್ಯಾದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಸಿಜೆಐ, 'ಕಾನೂನಿನ ಪರಿಭಾಷೆಯಲ್ಲಿನಿಜವಾದ ಸಮಾನತೆ ಅಂದರೆ ಏನು ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕು' ಎಂದಿದ್ದಾರೆ.
ಜತೆಗೆ 'ವಿಶ್ವದ ಬೃಹತ್ ಮತ್ತು ಸಂಕೀರ್ಣವಾದ ನ್ಯಾಯ ವ್ಯವಸ್ಥೆಯ ಭಾಗವಾಗಿ ನಾನು ಪಡೆದ ಅನುಭವದ ಆಧಾರದಲ್ಲಿ ಹೇಳುವುದಾದದರೆ ಸಮಾನ ನ್ಯಾಯದಾನವೇ ಸಮಾನತೆಯ ಮೊದಲ ಹಂತ' ಎಂದೂ ಹೇಳಿದ್ದಾರೆ.
ಈ ಸಮಾನ ನ್ಯಾಯದಾನವು ಕೇವಲ ಪತ್ರದ ಮೇಲಿನ ಉಲ್ಲೇಖವಾಗಿ ಉಳಿಯದೇ ಫಲಿತಾಂಶ ನೀಡುವದನ್ನು ಖಾತರಿಪಡಿಸಿಕೊಳ್ಳಬೇಕು ಎಂದೂ ಅವರು ಪ್ರತಿಪಾದಿಸಿದ್ದಾರೆ.

