HEALTH TIPS

ಲಸಿಕೆ, ಕ್ಯಾನ್ಸರ್‌ ಔಷಧ | ಕ್ಯೂಆರ್‌ ಕೋಡ್‌ ಕಡ್ಡಾಯ: ಕೇಂದ್ರ ಸರ್ಕಾರ

 ನವದೆಹಲಿ: ನಕಲಿ ಹಾಗೂ ಕಳಪೆ ಗುಣಮಟ್ಟದ ಔಷಧ ಮಾರಾಟವನ್ನು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರವು ಕೆಲವೊಂದು ಔಷಧಗಳ ಪ್ಯಾಕೇಜಿಂಗ್‌ ಮೇಲೆ ಕ್ಯೂಆರ್‌ ಕೋಡ್‌ ಮುದ್ರಿಸುವುದನ್ನು ಕಡ್ಡಾಯಗೊಳಿಸಿದೆ. 


ಎಲ್ಲ ರೀತಿಯ ಆಯಂಟಿಮೈಕ್ರೋಬಿಯಲ್ ಔಷಧಗಳು, ಲಸಿಕೆಗಳು, ನಾರ್ಕೋಟಿಕ್‌ ಮತ್ತು ಸೈಕೋಟ್ರೋಪಿಕ್ ಡ್ರಗ್ಸ್‌ ಹಾಗೂ ಕ್ಯಾನ್ಸರ್‌ ರೋಗದ ಚಿಕಿತ್ಸೆಗೆ ಬಳಸುವ ಔಷಧಗಳು ಇನ್ನು ಮುಂದೆ ಕಡ್ಡಾಯವಾಗಿ ಕ್ಯೂಆರ್‌ ಕೋಡ್‌ ಹೊಂದಿರಬೇಕು.

ಕೇಂದ್ರ ಆರೋಗ್ಯ ಸಚಿವಾಲಯವು ಔಷಧ ನಿಯಮ-1945ಕ್ಕೆ ತಿದ್ದುಪಡಿಗಳನ್ನು ತಂದು, ಕ್ಯೂಆರ್‌ ಕೋಡ್ ಆಧಾರಿತ 'ಟ್ರ್ಯಾಕ್-ಅಂಡ್-ಟ್ರೇಸ್' ಕಾರ್ಯವಿಧಾನದ ವ್ಯಾಪ್ತಿಯನ್ನು ವಿಸ್ತರಿಸಿದೆ.‌

ನಿಯಮಗಳಿಗೆ ತಿದ್ದುಪಡಿ ತರುವ ಮೂಲಕ ಈ ವರ್ಗಗಳ ಔಷಧಗಳನ್ನು 'ಎಚ್2' ಪಟ್ಟಿ ಅಡಿಯಲ್ಲಿ ತರಲಾಗಿದೆ. 'ಎಚ್‌2' ಪಟ್ಟಿಯಡಿ ಬರುವ ಔಷಧಗಳ ಗುರುತಿಸುವಿಕೆ ಮತ್ತು ಪರಿಶೀಲನೆಗಾಗಿ ಬಾರ್ ಕೋಡ್‌ಗಳು ಅಥವಾ ಕ್ವಿಕ್ ರೆಸ್ಪಾನ್ಸ್ (ಕ್ಯೂಆರ್) ಕೋಡ್‌ಗಳ ಬಳಕೆಯನ್ನು ಕಡ್ಡಾಯಗೊಳಿಸುತ್ತದೆ.

'ತಿದ್ದುಪಡಿ ಮಾಡಿದ ನಿಯಮಗಳ ಪ್ರಕಾರ, ತಯಾರಕರು ಔಷಧದ ಪ್ರಾಥಮಿಕ ಪ್ಯಾಕೇಜಿಂಗ್ ಲೇಬಲ್‌ನಲ್ಲಿ ಅಥವಾ ದ್ವಿತೀಯ ಹಂತದ ಪ್ಯಾಕೇಜಿಂಗ್‌ನಲ್ಲಿ ಬಾರ್‌ಕೋಡ್‌ ಅಥವಾ ಕ್ಯೂಆರ್‌ ಕೋಡ್‌ಅನ್ನು ಮುದ್ರಿಸುವುದು ಕಡ್ಡಾಯವಾಗಿರುತ್ತದೆ' ಎಂದು ಸಚಿವಾಲಯ ತಿಳಿಸಿದೆ.

ಕ್ಯೂಆರ್‌ ಕೋಡ್‌ಗಳು, ಪೂರೈಕೆ ಸರಪಳಿಯಾದ್ಯಂತ ಸಾಫ್ಟ್‌ವೇರ್‌ ಅಪ್ಲಿಕೇಶನ್‌ಗಳ ಮೂಲಕ ಔಷಧಗಳ ದೃಢೀಕರಣ ಮತ್ತು ಪರಿಶೀಲನೆಯನ್ನು ಸಾಧ್ಯವಾಗಿಸಲಿವೆ.

'ಇದುವರೆಗೆ ದೇಶದ ಅಗ್ರ 300 ಔಷಧ ಬ್ರ್ಯಾಂಡ್‌ಗಳಿಗೆ ಮಾತ್ರ ಕ್ಯೂಆರ್‌ ಕೋಡ್‌ ಮುದ್ರಿಸುವುದು ಕಡ್ಡಾಯವಾಗಿತ್ತು. ನಿಯಮಗಳಿಗೆ ತಿದ್ದುಪಡಿ ತರುವ ಮೂಲಕ ಅದರ ವ್ಯಾಪ್ತಿಯನ್ನು ಗಮನಾರ್ಹವಾಗಿ ವಿಸ್ತರಿಸಲಾಗಿದೆ' ಎಂದು ಸಚಿವಾಲಯ ಹೇಳಿದೆ. 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries