HEALTH TIPS

ಛತ್ತೀಸಗಢ: ಮದ್ಯಪಾನಿಯ ವರಿಸಲು ನಿರಾಕರಿಸಿದ ವಧು

 ಜಾಂಜ್ಗೀರ್ : ವರನು ಅತಿಯಾಗಿ ಮದ್ಯಪಾನ ಮಾಡಿರುವುದನ್ನು ವಿರೋಧಿಸಿ 22 ವರ್ಷದ ಮುಸ್ಕಾನ್ ಪ್ರಧಾನ್ ಎಂಬ ಯುವತಿ ಮದುವೆಯಾಗಲು ನಿರಾಕರಿಸಿದ್ಧಾರೆ.


ಮದ್ಯಪಾನದ ವ್ಯಸನದ ವಿರುದ್ಧ ಯುವತಿಯು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಕ್ಕಾಗಿ ಜಾಂಜ್ಗೀರ್‌ನ ಚಂಪಾ ಪೊಲೀಸ್ ಠಾಣೆಯ ಅಧಿಕಾರಿ ವಿಜಯ್ ಕುಮಾರ್ ಪಾಂಡೆ, ಸಾಮಾಜಿಕ ಕಾರ್ಯಕರ್ತರು ಮತ್ತು ಮಹಿಳಾ ಪ್ರತಿನಿಧಿಗಳ ಸಮ್ಮುಖದಲ್ಲಿ ಗುರುವಾರ ಸನ್ಮಾನಿಸಿದ್ದಾರೆ.

ಈ ಘಟನೆಯ ಕುರಿತಾಗಿ ಗ್ರಾಮದ ಅನೇಕ ನಿವಾಸಿಗಳು ಯುವತಿಯ ದಿಟ್ಟ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

ಈ ಘಟನೆಯು ಛತ್ತೀಸಗಢದ ಜಾಂಜ್ಗೀರ್‌ನ ಚಂಪಾ ಜಿಲ್ಲೆಯಲ್ಲಿ ನಡೆದಿದೆ. ಖೋಖ್ರಾ ಗ್ರಾಮದ ನಿವಾಸಿ ಸಂತ ರಾಮ್ (24) ಜೊತೆ ಕೊಸಮಂಡ ಗ್ರಾಮದ ನಿವಾಸಿ ಮುಸ್ಕಾನ್ ಪ್ರಧಾನ್‌ ಮದುವೆ ಜೂನ್‌ 23ರಂದು ನಿಗದಿಯಾಗಿತ್ತು. ಮದುವೆ ದಿಬ್ಬಣ ಸಂಜೆ 4 ಗಂಟೆಗೆ ಕೊಸಮಂಡಕ್ಕೆ ತಲುಪಿತು.ಅದೇ ಸಂದರ್ಭದಲ್ಲಿ ಮದುವೆ ಶಾಸ್ತ್ರಗಳು ಪ್ರಾರಂಭವಾಗಿದ್ದು, ವರನು ಅತಿಯಾಗಿ ಮದ್ಯಪಾನ ಮಾಡಿದ್ದರಿಂದ ಅವನಿಗೆ ಸರಿಯಾಗಿ ನಿಲ್ಲಲು ಸಾಧ್ಯವಾಗಲಿಲ್ಲ.ವರನ ಸ್ಥಿತಿಯ ಬಗ್ಗೆ ತಿಳಿದ ನಂತರ ಮುಸ್ಕಾನ್‌ ಮದುವೆಯಾಗಲು ನಿರಾಕರಿಸಿದರು.

ವಧುವಿನ ಕುಟುಂಬದವರು ಮದುವೆಯ ಸಿದ್ಧತೆಗಳಿಗಾಗಿ ಮಾಡಿದ ವೆಚ್ಚಕ್ಕೆ ₹3 ಲಕ್ಷ ಪರಿಹಾರವಾಗಿ ನೀಡಲು ವರನ ಕಡೆಯವರು ಒಪ್ಪಿಕೊಂಡಿದ್ದಾರೆ. ಮುಸ್ಕಾನ್ ಪ್ರಧಾನ್‌ 10ನೇ ತರಗತಿಯವರೆಗೆ ಶಿಕ್ಷಣ ಪಡೆದಿದ್ದು, ವಿದ್ಯಾಭ್ಯಾಸ ಮುಂದುವರಿಸುವುದಾಗಿ ತಿಳಿಸಿದ್ದಾರೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries