ಕುಂಬಳೆ: ಸೂರಂಬೈಲು ಸರ್ಕಾರಿ ಪ್ರೌಢಶಲೆಯಲ್ಲಿ ನಾಡೋಜ ಕಯ್ಯಾರ ಕಿಞ್ಞಣ್ಣ ರೈಯವರ ಜನುಮದಿನವನ್ನು ಮಂಗಳವಾರ ಆಚರಿಸಲಾಯಿತು. ಖ್ಯಾತ ಸಾಹಿತಿ ಜಯಶ್ರೀ ಅನಂತಪುರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಶಿಕ್ಷಕಿ ಸುನೀತ ಎ ಅಧ್ಯಕ್ಷತೆ ವಹಿಸಿದರು. ಹಿರಿಯ ಶಿಕ್ಷಕಿ ದೇವಿಕಾರಾಣಿ ಕೆ.ಎಸ್. ಶುಭಾಶಂಸನೆಗೈದು. ವಿದ್ಯಾರ್ಥಿಗಳು ಕವಿ ಕಯ್ಯಾರರಿಗೆ ಸಂಬಂಧಿದಿದ ಗೀತೆ, ಕವನ ವಾಚನ, ಅಭಿನಯ ಗೀತೆ, ಸಮೂಹ ಗೀತೆ, ಕವಿ ಪರಿಚಯ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡಿದರು. ಕನ್ನಡ ಸಾಹಿತ್ಯ ವೇದಿಕೆಯ ಸಂಚಾಲಕಿ ಹೇಮಲತ ಎನ್ ಸ್ವಾಗತಿಸಿ, ಹಿರಿಯ ಶಿಕ್ಷಕಿ ಮಮತ ಇ.ಆರ್. ವಂದಿಸಿದರು. ಶುಭ ಕಣ್ಣೂರು ಕಾರ್ಯಕ್ರಮ ನಿರ್ವಹಿಸಿದರು.

.jpg)
