HEALTH TIPS

ಭಾರತೀಯ ಸೇನೆಗೆ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಥ್ ಸಾರಥ್ಯ

ನವದೆಹಲಿ: ಲೆಫ್ಟಿನೆಂಟ್ ಜನರಲ್‌ ಧೀರಜ್ ಸೇಥ್ ಅವರನ್ನು ಸೇನೆಯ ನೂತನ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

ಸೇನಾಪಡೆಗಳ ಮುಖ್ಯಸ್ಥರಾಗಿರುವ ಉಪೇಂದ್ರ ದ್ವಿವೇದಿ ಅವರು ಜೂನ್‌ 30ರಂದು ನಿವೃತ್ತರಾಗಲಿದ್ದು, ಅವರ ಸ್ಥಾನದಲ್ಲಿ ಧೀರಜ್ ಮುಂದುವರಿಯಲಿದ್ದಾರೆ. ಪ್ರಸ್ತುತ ಸೇನೆಯ ಉಪಮುಖ್ಯಸ್ಥರಾಗಿರುವ ಅವರನ್ನು, ಸೇವಾ ಹಿರಿತನವನ್ನು ಆಧರಿಸಿ ನೇಮಿಸಲಾಗಿದೆ.

'ಜನರಲ್ ಉಪೇಂದ್ರ ದ್ವಿವೇದಿ ಅವರು 2026ರ ಜೂನ್ 30ರಂದು ನಿವೃತ್ತರಾದ ನಂತರ ಧೀರಜ್‌ ಅಧಿಕಾರ ವಹಿಸಿಕೊಳ್ಳಲಿದ್ದಾರೆ' ಎಂದು ರಕ್ಷಣಾ ಸಚಿವಾಲಯ ಶನಿವಾರ ಹೇಳಿಕೆ ಬಿಡುಗಡೆ ಮಾಡಿದೆ.

ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಳೇ ವಿದ್ಯಾರ್ಥಿಯಾಗಿರುವ ಧೀರಜ್‌, 1986ರ ಡಿಸೆಂಬರ್‌ನಲ್ಲಿ ಸೇನೆಗೆ ನಿಯೋಜನೆಗೊಂಡಿದ್ದರು.

'ಧೀರಜ್ ಸೇಥ್ ಅವರು ವಿವಿಧ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದ್ದರು. ಪ್ರತಿ ಹಂತದಲ್ಲೂ ಹೊಣೆಗಾರಿಕೆ ನಿಭಾಯಿಸಿದ ಅನುಭವ ಹೊಂದಿದ್ದಾರೆ. ಮರುಭೂಮಿ ವಲಯದಲ್ಲಿ ಶಸ್ತ್ರಸಜ್ಜಿತ ರೆಜಿಮೆಂಟ್, ಭಾರತ-ಪಾಕಿಸ್ತಾನ ಗಡೆಇಯಲ್ಲಿ ಶಸ್ತ್ರಸಜ್ಜಿತ ಬ್ರಿಗೇಡ್ ಮತ್ತು ಜಮ್ಮು & ಕಾಶ್ಮೀರದಲ್ಲಿ ಬಂಡಾಯ ನಿಗ್ರಹ ಪಡೆಯನ್ನು ಮುನ್ನಡೆಸಿದ್ದರು' ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries