HEALTH TIPS

ಒಪ್ಪಂದಕ್ಕಾಗಿ ಟ್ರಂಪ್‌ ರಿಂದ ಹಲವು ಬಗೆಯ ಒತ್ತಡತಂತ್ರ: ಇರಾನ್‌ ನ ಸರ್ವೋಚ್ಚ ನಾಯಕ ಮುಜ್ತಾಬಾ ಖಾಮಿನೈ

ಟೆಹರಾನ್: ಮಧ್ಯಪ್ರಾಚ್ಯ ಯುದ್ಧವನ್ನು ಕೊನೆಗೊಳಿಸುವ ವಿಚಾರದಲ್ಲಿ ತಾನು ವಿಭಿನ್ನವಾದ ಅಭಿಪ್ರಾಯವನ್ನು ಹೊಂದಿದ್ದರೂ, ಅಮೆರಿಕದ ಜೊತೆ ಶಾಂತಿ ಒಪ್ಪಂದ ಏರ್ಪಡಿಸುವುದಕ್ಕೆ ತಾನು ಅಧ್ಯಕ್ಷ ಮೊಹಮ್ಮದ್ ಪೆಝೆಶ್ಕಿಯಾನ್ ಅವರಿಗೆ ಅನುಮತಿಯನ್ನು ನೀಡಿರುವುದಾಗಿ ಇರಾನ್‌ ನ ಸರ್ವೋಚ್ಚ ನಾಯಕ ಅಯಾತುಲ್ಲಾ ಮೊಜ್ತಬಾ ಖಾಮಿನೈ ಅವರು ತಿಳಿಸಿದ್ದಾರೆ.

ಯುದ್ಧದಲ್ಲಿ ತೀರಾ ಹತಾಶವಾಗಿದ್ದ ಅಮೆರಿಕವು ಈ ಒಪ್ಪಂದವನ್ನು ಏರ್ಪಡಿಸಿಕೊಳ್ಳಲು ಎಲ್ಲಾ ರೀತಿಯ ಒತ್ತಡತಂತ್ರಗಳನ್ನು ಅನುಸರಿಸಿತ್ತೆಂದು ಅವರು ಆರೋಪಿಸಿದರು.

ಯುದ್ಧವನ್ನು ಅಂತ್ಯಗೊಳಿಸಲು ಇರಾನ್ ಹಾಗೂ ಅಮೆರಿಕ ಒಪ್ಪಂದಕ್ಕೆ ಸಹಿಹಾಕಿದ ಬಳಿಕ ಮೊಜ್ತಬಾ ಅವರು ನೀಡಿದ ಮೊದಲ ಪ್ರತಿಕ್ರಿಯೆ ಇದಾಗಿದೆ.

ಒಂದು ವೇಳೆ ಅಮೆರಿಕವು ಈ ಒಪ್ಪಂದಕ್ಕೆ ಸಂಬಂಧಿಸಿ ಅತಿಯಾದ ಬೇಡಿಕೆಗಳನ್ನು ಮುಂದಿರಿಸಿದಲ್ಲಿ, ಅವುಗಳನ್ನು ಸ್ವೀಕರಿಸಲಾಗುವುದಿಲ್ಲವೆಂದು ಪೆಝೆಶ್ಕಿಯಾನ್ ಅವರು ತನಗೆ ಭರವಸೆ ನೀಡಿದ್ದಾರೆಂದು ಖಾಮಿನೈ ತಿಳಿಸಿದ್ದಾರೆ.

''ಭವಿಷ್ಯದಲ್ಲಿ ಮುಖಾಮುಖಿ ಮಾತುಕತೆಯನ್ನು ನಡೆಸುವುದೆಂದರೆ ಶತ್ರುವಿನ ಅಭಿಪ್ರಾಯವನ್ನು ಒಪ್ಪಿಕೊಳ್ಳುವುದೆಂದು ಅರ್ಥವಲ್ಲ'' ಎಂದು ಮುಜ್ತಬಾ ತನ್ನ ಸಂದೇಶದಲ್ಲಿ ಪ್ರತಿಪಾದಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries