HEALTH TIPS

ಶೌಚಾಲಯದಲ್ಲಿ ಮೊಬೈಲ್ ಅಡಗಿಸಿಟ್ಟಿದ್ದ ನೀಟ್ ಆಕಾಂಕ್ಷಿ; ಸಿಕ್ಕಿ ಬಿದ್ದಿದ್ದು ಹೇಗೆ?

ಹೈದರಾಬಾದ್: ನೀಟ್ ಆಕಾಂಕ್ಷಿಯೊಬ್ಬ  ಮೊಬೈಲ್ ಫೋನ್ ಅನ್ನು ಶೌಚಾಲಯದಲ್ಲಿ ಅಡಗಿಸಿಟ್ಟು ಸಿಕ್ಕಿ ಬಿದ್ದಿರುವ ಘಟನೆ ಹೈದರಾಬಾದ್‌ನಲ್ಲಿ (Hyderbad) ನಡೆದಿದೆ. ನೀಟ್ ಮರು ಪರೀಕ್ಷೆ ಬರೆಯಲೆಂದು ಜೂನ್ 21ರಂದು ಭಾನುವಾರ ಹೈದರಾಬಾದ್ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದ 18 ವರ್ಷದ ನೀಟ್ ಆಕಾಂಕ್ಷಿ ಶೌಚಾಲಯದ ಫ್ಲಶ್ ಟ್ಯಾಂಕ್‌ನಲ್ಲಿ ಮೊಬೈಲ್ ಅಡಗಿಸಿಟ್ಟಿದ್ದಾನೆ.

ಪರೀಕ್ಷೆಯ ಸಮಯದಲ್ಲಿ ಉತ್ತರಗಳನ್ನು ನೋಡಲು ಆತ ಶಾಲೆಯ ವಾಶ್‌ರೂಮ್ ಗೆ ಹೋಗಿದ್ದನ್ನು ಗಮನಿಸಿದ ಪೊಲೀಸರು ಮೊಬೈಲ್ ಫೋನ್ ಬಳಸಿದ ಆರೋಪದ ಮೇಲೆ ಬಂಧಿಸಿದರು.

ಆದಿಬಟ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ರಾಗಣ್ಣಗುಡದಲ್ಲಿರುವ ಜಿಲ್ಲಾ ಪರಿಷತ್ ಪ್ರೌಢಶಾಲೆಯಲ್ಲಿ ನೀಟ್ ಯುಜಿ 2026 ಮರುಪರೀಕ್ಷೆಯ ಸಮಯದಲ್ಲಿ ಶಾಲೆಯ ವಾಶ್‌ರೂಮ್‌ನಲ್ಲಿ ಅಡಗಿಸಿಟ್ಟಿದ್ದ ಮೊಬೈಲ್ ಫೋನ್ ಬಳಸುತ್ತಿದ್ದ ಆರೋಪದ ಮೇರೆಗೆ ನೀಟ್ ಅಭ್ಯರ್ಥಿಯೊಬ್ಬನನ್ನು ಬಂಧಿಸಲಾಗಿದೆ. ಪರೀಕ್ಷೆ ಪ್ರಾರಂಭವಾಗುವ ಕೆಲವು ಗಂಟೆಗಳ ಮೊದಲು ಆತ ಮೊಬೈಲ್ ಅನ್ನು ಇಲ್ಲಿ ಅಡಗಿಸಿಟ್ಟಿದ್ದನು.

ಬಿಗಿ ಭದ್ರತೆ, ಪರೀಕ್ಷಾ ಕೇಂದ್ರದಲ್ಲಿ ಹಲವಾರು ಸುತ್ತಿನ ತಪಾಸಣೆ ಇದ್ದರೂ ಕೂಡ ಆತ ಮೊಬೈಲ್ ಅನ್ನು ಒಳಗೆ ತಂದು ತಪ್ಪಿಸಿಡುವಲ್ಲಿ ಯಶಸ್ವಿಯಾಗಿದ್ದಾನೆ. ಈ ಕುರಿತು ವಿಚಾರಣೆಗಾಗಿ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಹೈದರಾಬಾದ್ ನಗರ ಪೊಲೀಸರು, ಅಚಂಪೆಟ್ ನಿವಾಸಿಯಾದ ಅಭ್ಯರ್ಥಿಯು ವಂಚನೆಗೆ ಮೊದಲೇ ಯೋಜನೆ ಹಾಕಿಕೊಂಡಿದ್ದನು. ಬೆಳಗ್ಗೆ 7 ಗಂಟೆ ಸುಮಾರಿಗೆ ಶಾಲಾ ಆವರಣಕ್ಕೆ ಆಗಮಿಸಿದ ಆತ ಶಾಲೆಯ ಕಾಂಪೌಂಡ್ ಗೋಡೆಗೆ ಸಂಪರ್ಕಗೊಂಡಿರುವ ವೆಂಟಿಲೇಟರ್ ಅನ್ನು ಪ್ರವೇಶಿಸಿ ವಾಶ್ ರೂಮ್ ಪ್ರದೇಶದ ಬಳಿ ಮೊಬೈಲ್ ಫೋನ್ ಅನ್ನು ಇರಿಸಿದ್ದಾನೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಪರೀಕ್ಷೆ ಪ್ರಾರಂಭವಾಗುವ ಸ್ವಲ್ಪ ಮೊದಲು ಆತ ಮೊಬೈಲ್ ಅನ್ನು ಜಿಪ್-ಲಾಕ್ ಕವರ್ ಒಳಗೆ ಮುಚ್ಚಿ ವಾಶ್ ರೂಂನಲ್ಲಿರುವ ಫ್ಲಶ್ ಟ್ಯಾಂಕ್ ಒಳಗೆ ಇಟ್ಟಿದ್ದಾನೆ ಎಂದು ತಿಳಿಸಿದರು.

ಎರಡು ಬಾರಿ ಆತನನ್ನು ಹೊರಗೆ ತಪಾಸಣೆ ಮಾಡಲಾಗಿದೆ. ಬೆಳಗ್ಗೆ 6 ಗಂಟೆಗೆ ಮತ್ತು 11 ಗಂಟೆಗೆ ಎರಡು ಬಾರಿ ಆತನನ್ನು ತಪಾಸಣೆಗೆ ಒಳಪಡಿಸಲಾಗಿದೆ. ಹೀಗಾಗಿ ಆತ ಮೊದಲೇ ಬಚ್ಚಿಟ್ಟಿದ್ದ ಫೋನ್ ಸಿಕ್ಕಿರಲಿಲ್ಲ.

ಪರೀಕ್ಷೆಯ ಸಮಯದಲ್ಲಿ ಆತ ಹೊಟ್ಟೆ ನೋವೆಂದು ಹೇಳಿ ಶೌಚಾಲಯ ಬಳಸಲು ಅನುಮತಿ ಕೇಳಿದ್ದಾನೆ. ಕೇಂದ್ರಕ್ಕೆ ಸಾಮಾನ್ಯ ಸೌಲಭ್ಯವಾಗಿ ಕಾರ್ಯನಿರ್ವಹಿಸುವ ಶೌಚಾಲಯವು ಮುಖ್ಯ ಶಾಲಾ ಕಟ್ಟಡದಿಂದ ಸಾಕಷ್ಟು ದೂರದಲ್ಲಿದೆ. ಅಲ್ಲಿಂದ ಆತ ಮರಳಿ ಬರಲು ಸಾಕಷ್ಟು ಸಮಯ ತೆಗೆದುಕೊಂಡಾಗ ಮೇಲ್ವಿಚಾರಕರು ಅನುಮಾನಗೊಂಡು ಪರಿಶೀಲಿಸಲು ಸಿಬ್ಬಂದಿಯನ್ನು ಕಳುಹಿಸಿದ್ದಾರೆ. ಆಗ ಅಲ್ಲಿ ಅಭ್ಯರ್ಥಿಯು ಮೊಬೈಲ್ ನಲ್ಲಿ ಉತ್ತರ ಹುಡುಕುತ್ತಿರುವುದು ಕಂಡು ಬಂದಿದೆ. ತಕ್ಷಣವೇ ಕೇಂದ್ರದಲ್ಲಿ ನಿಯೋಜಿಸಲಾದ ಪೊಲೀಸ್ ಸಿಬ್ಬಂದಿ ಆತನನ್ನು ಮೊಬೈಲ್ ನೊಂದಿಗೆ ವಶಕ್ಕೆ ಪಡೆದರು.

ಅಭ್ಯರ್ಥಿಯು ಪರೀಕ್ಷೆಯ ಸಮಯದಲ್ಲಿ ಉತ್ತರಗಳನ್ನು ಹುಡುಕಲು ಗೂಗಲ್ ಕ್ರೋಮ್ ಅನ್ನು ಬಳಸುತ್ತಿದ್ದನು. ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾನ್ಯವಾಗಿ ಬಳಸುವ ಅಪ್ಲಿಕೇಶನ್‌ಗಳನ್ನು ಹೊರತುಪಡಿಸಿ ಸಾಧನದಲ್ಲಿ ಯಾವುದೇ ವಿಶೇಷ ವಂಚನೆ ಅಪ್ಲಿಕೇಶನ್‌ಗಳು ಇರಲಿಲ್ಲ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಅಭ್ಯರ್ಥಿಯು ತಪ್ಪನ್ನು ಒಪ್ಪಿಕೊಂಡಿದ್ದು, ಆತನ ವಿರುದ್ಧ ಶಾಲಾ ಆಡಳಿತವು ಸಲ್ಲಿಸಿದ ದೂರಿನ ಆಧಾರದ ಮೇಲೆ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries