ಕಣ್ಣೂರು: ಕಣ್ಣೂರು ಅಂಚರಕಂಡಿ ದಂತ ವೈದ್ಯಕೀಯ ಕಾಲೇಜು ವಿದ್ಯಾರ್ಥಿ ನಿತಿನ್ ರಾಜ್ ಆತ್ಮಹತ್ಯೆ ಪ್ರಕರಣದ ಮೊದಲ ಆರೋಪಿ ಶಿಕ್ಷಕ ಡಾ. ಎಂ. ಕೆ. ರಾಮ್‍ಗೆ ನಿರೀಕ್ಷಣಾ ಜಾಮೀನು ನಿರಾಕರಿಸಲಾಗಿದೆ.
ರಾಮ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಇದಕ್ಕೂ ಮೊದಲು, ತಲಶ್ಶೇರಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ರಾಮ್ ಅವರ ಜಾಮೀನು ಅರ್ಜಿಯನ್ನು ಸಹ ತಿರಸ್ಕರಿಸಿತ್ತು.
ಏಪ್ರಿಲ್ 10 ರಂದು ನಿತಿನ್ ರಾಜ್ ಕಾಲೇಜು ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಕ್ಕೆ ತಿಳಿದುಬಂದಿದೆ. ವಿಭಾಗದ ಮುಖ್ಯಸ್ಥ ರಾಮ್ ತನಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ನಿತಿನ್ ಕುಟುಂಬಕ್ಕೆ ಮೊದಲೇ ತಿಳಿಸಿದ್ದರು. ಶಿಕ್ಷಕರಾದ ಡಾ. ಎಂ. ಕೆ. ರಾಮ್ ಮತ್ತು ಸಂಗೀತಾ ನಂಬಿಯಾರ್ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.
ನಿತಿನ್ ರಾಜ್ ಸಾವಿನಲ್ಲಿ ಶಿಕ್ಷಕಿಯ ವಿರುದ್ಧ ವಿದ್ಯಾರ್ಥಿಗಳು ಗಂಭೀರ ಆರೋಪಗಳನ್ನು ಮಾಡಿದ್ದರು. ದಂತ ಅಂಗರಚನಾಶಾಸ್ತ್ರ ವಿಭಾಗದ ಮುಖ್ಯಸ್ಥ ಎಂ.ಕೆ. ರಾಮ್ ತಮಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆ ಎಂದು ವಿದ್ಯಾರ್ಥಿಗಳು ಪೆÇಲೀಸರಿಗೆ ತಿಳಿಸಿದ್ದರು. ಘಟನೆಯ ನಂತರ, ಡಾ. ಎಂ.ಕೆ. ರಾಮ್ ಮತ್ತು ಡಾ. ಸಂಗೀತಾ ನಂಬಿಯಾರ್ ಅವರನ್ನು ಕಾಲೇಜಿನಿಂದ ಹೊರಹಾಕಲಾಯಿತು.

