HEALTH TIPS

ಶಿಗೆಲ್ಲಾ ಸೋಂಕು: ವಯನಾಡ್‌ನಲ್ಲಿ ಮತ್ತೊಂದು ಪ್ರಕರಣ ದೃಢ

ವಯನಾಡ್: ವಯನಾಡು ಜಿಲ್ಲೆಯಲ್ಲಿ ಗುರುವಾರ ಶಿಗೆಲ್ಲಾ ಸೋಂಕಿನ ಮತ್ತೊಂದು ಪ್ರಕರಣ ದೃಢಪಟ್ಟಿದೆ.


'ಶಾಲೆಯೊಂದರ ವಿದ್ಯಾರ್ಥಿಗಳಲ್ಲಿ ಮತ್ತೊಬ್ಬರಿಗೆ ಸೋಂಕು ದೃಢಪಟ್ಟಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಒಂಬತ್ತಕ್ಕೆ ಏರಿಕೆಯಾಗಿದೆ. ಐವರ ಪರೀಕ್ಷಾ ವರದಿಗೆ ನಿರೀಕ್ಷಿಸಲಾಗುತ್ತಿದೆ' ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಶಿಗೆಲ್ಲಾ ಸೋಂಕು ಪತ್ತೆಯಾದ ಪ್ರದೇಶದ ಸುತ್ತಮುತ್ತಲ ಶಾಲಾ-ಕಾಲೇಜುಗಳಿಗೆ ಜೂನ್‌ 14ರವರೆಗೂ ಜಿಲ್ಲಾಧಿಕಾರಿ ರಜೆ ಘೋಷಣೆ ಮಾಡಿದ್ದಾರೆ.

ಪರಿಸ್ಥಿತಿ ನಿಯಂತ್ರಣದಲ್ಲಿದೆ: 'ರಾಜ್ಯದ ವಿವಿಧೆದೆ ಶಿಗೆಲ್ಲಾ ಸೋಂಕಿನ ಪ್ರಕರಣಗಳು ವರದಿಯಾಗಿವೆ. 578 ಮಂದಿಯಲ್ಲಿ ಲಕ್ಷಣಗಳು ಕಾಣಿಸಿಕೊಂಡಿವೆ. 55 ಮಂದಿ ಆಸ್ಪತ್ರೆ ಸೇರಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ' ಎಂದು ಕೇರಳಂ ಆರೋಗ್ಯ ಸಚಿವ ಕೆ.ಮುರಳೀಧರನ್‌ ತಿಳಿಸಿದ್ದಾರೆ.

'ತಿರುವನಂತಪುರದಲ್ಲಿ ಆರು, ಕೊಲ್ಲಂನಲ್ಲಿ ಇಬ್ಬರು ಮತ್ತು ಕೋಯಿಕೋಡ್‌ನಲ್ಲಿ ಮೂವರ ವರದಿಯಲ್ಲಿ ಪಾಸಿಟಿವ್‌ ಬಂದಿದೆ. ವಯನಾಡ್‌ನ ಶಾಲೆಯ ಕೊಳವೆಬಾವಿಯ ನೀರಿನಲ್ಲಿ ರೋಗಕಾರಕ ಬ್ಯಾಕ್ಟೀರಿಯಾ ಪತ್ತೆಯಾಗಿಲ್ಲ' ಎಂದು ತಿಳಿಸಿದರು.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries