ಕಾಸರಗೋಡು: ಜಿಲ್ಲೆಯ ನೂತನ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಯಾಗಿ ಪಿ. ನಿತಿನ್ ರಾಜ್ ಐಪಿಎಸ್ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ಕಾಸರಗೋಡು ಎಸ್ಪಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲೆಯಿಂದ ಕಣ್ಣೂರು ನಗರ ಪೊಲೀಸ್ ಆಐಉಕ್ತರಾಗಿ ವರ್ಗಾವಣೆಗೊಳ್ಳುತ್ತಿರುವ ಬಿ. ವಿ. ವಿಜಯ್ ಭರತ್ ರೆಡ್ಡಿ ಅವರಿಂದ ಅಧಿಕಾರದ ವಹಿಸಿಕೊಮಡರು.
ಕಣ್ಣೂರು ಜಿಲ್ಲಾ ಪೆÇಲೀಸ್ ಕಮೀಷನರ್ ಸೇವೆಯಲ್ಲಿದ್ದ ನಿತಿನ್ ರಾಜ್ ಅವರನ್ನು ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನಿಯುಕ್ತಿಗೊಳಿಸಲಾಗಿದೆ. ಕಾಸರಗೋಡು ಜಿಲ್ಲೆ ರಚನೆಯಾದ 44 ವರ್ಷದ ನಂತರ ಜಿಲ್ಲೆಗೆ ಇದೇ ಮೊದಲ ಬಾರಿಗೆ ಜಿಲ್ಲೆಯವರೇ ಆದ ಪೆÇಲೀಸ್ ವರಿಷ್ಠಾಧಿಕಾರಿಯೊಬ್ಬರನ್ನು ನೇಮಕಗೊಳಿಸಲಾಗಿದೆ. ಕಾಞಂಗಾಡು ರಾವಣೇಶ್ವರಂ ನಿವಾಸಿಯಾಗಿರುವ ಇವರು ಕಾಞಂಗಾಡು ದುರ್ಗಾ ಹೈಸ್ಕೂಲಿನ ಹಳೇ ವಿದ್ಯಾರ್ಥಿಯಾಗಿದ್ದಾರೆ.


