ಮಂಜೇಶ್ವರ: ಸಮಾಜ ಸೇವೆ ಮಾದರಿಯಾಗುವಂತಹ ಕಾರ್ಯ, ಅದು ಸ್ಥಳೀಯ ಜನತೆಯ ಅಗ್ರಹ, ಬೇಡಿಕೆ, ನಂಬಿಕೆ ಮತ್ತು ವಿಶ್ವಾಸ ಪ್ರಕ್ರಿಯೆ ಆಗಬೇಕು. ಚುನಾವಣೆಯಲ್ಲಿ ಸೋಲು, ಗೆಲುವು ಪ್ರಕ್ರಿಯೆಯ ಭಾಗ. ಆದರೆ ಸಮಾಜ ಸೇವೆ ನಿರಂತರವಾಗಿರಬೇಕೆಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ. ಹೇಳಿದರು.
ಮಂಜೇಶ್ವರ ಪಂಚಾಯತಿ ಬೂತ್ 14ರ ವತಿಯಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಬ್ಯಾಗ್ ಹಾಗೂ ಪುಸ್ತಕ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಆದರ್ಶ ಬಿ.ಎಂ. ಮಾತನಾಡಿದರು.
ಸಮಾಜ ಸೇವಕ ನ್ಯಾಯವಾದಿ ನವೀನ್ ರಾಜ್ ಉಪಸ್ಥಿತರಿದ್ದರು. ಬೂತ್ ಅಧ್ಯಕ್ಷ ಜಯರಾಮ್ ಅಧ್ಯಕ್ಷತೆ ವಹಿಸಿದ್ದರು.
ಮುಖಂಡರಾದ ಯಶ್ ಪಾಲ್, ಯಶರಾಜ್ ಮಂಜೇಶ್ವರ, ನವೀನ್ ಉದ್ಯಾವರ, ಚಕ್ರೇಶ್ ಮಂಜೇಶ್ವರ, ದಿನೇಶ್ ಗುಡ್ಡೆ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಎಸ್.ಎಸ್.ಎಲ್ಸಿ. ಹಾಗೂ ಪಿಯುಸಿಯಲ್ಲಿ ಶೇ.90 ಕ್ಕಿಂತ ಅಧಿಕ ಅಂಕ ಪಡೆದವರನ್ನು ಬಿಜೆಪಿ ವತಿಯಿಂದ ಸನ್ಮಾನಿಸಲಾಯಿತು.

.jpg)
.jpg)
