ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯಿತಿ ಒಂದನೇ ವಾರ್ಡು ಮಜಿರ್ಪಳ್ಳಕಟ್ಟೆ ಅಂಗನವಾಡಿಯಲ್ಲಿ ಪ್ರವೇಶೋತ್ಸವ ಮತ್ತು ದೂರು ಪೆಟ್ಟಿಗೆಯ ಉದ್ಘಾಟನಾ ಕಾರ್ಯಕ್ರಮ ಶನಿವಾರ ಜರಗಿತು. ವಾರ್ಡು ಜನಪ್ರತಿನಿ ಹರೀಶ ಅವರ ಅಧ್ಯಕ್ಷತೆಯಲ್ಲಿ ಬ್ಲಾಕ್ ಪಂಚಾಯತಿ ಸದಸ್ಯ ಮಹೇಶ್ ವಳಕುಂಜ ಉದ್ಘಾಟಿಸಿದರು. ಜಾಗೃತಾ ಸಮಿತಿ ಸದಸ್ಯ ಸೀತಾರಾಮ, ಶಾಸ್ತಾಯುವಕ ಸಂಘದ ಅಧ್ಯಕ್ಷ ಅಕ್ಷಯ್, ಆಶಾ ಕಾರ್ಯಕರ್ತೆ, ಕುಟುಂಬಶ್ರೀ ಹಸಿರು ಕ್ರಿಯಾಸೇನೆ ಸದಸ್ಯರು, ರಕ್ಷಕರು ಭಾಗವಹಿಸಿದರು. ಅಂಗನವಾಡಿ ಕಾರ್ಯಕರ್ತೆ ಎ. ದೇವಕಿ ಸ್ವಾಗತಿಸಿ, ಸಹಾಯಕಿ ಸುಶೀಲ ವಂದಿಸಿದರು.

.jpg)
