ಮುಳ್ಳೇರಿಯ: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ, ಯಕ್ಷಗಾನ ಕಲಾವಿದ, ಯಕ್ಷಗುರು ಕೆ.ಸಿ ಪಾಟಾಳಿ ಎಂದೇ ಗುರುತಿಸಲ್ಪಟ್ಟಿದ್ದ ಕೆ. ಚಂದ ಪಾಟಾಳಿ ಪಡುಮಲೆ (80)ಬುಧವಾರ ನಿಧನ ಹೊಂದಿದರು. ಸುಳ್ಯಪದವು ಬಳಿಯ ಪಡುಮಲೆಯಲ್ಲಿ ವಾಸವಾಗಿದ್ದ ಇವರು, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದರು. ಪಡುಮಲೆ ಕ್ಷೇತ್ರದ ಚರಿತ್ರೆಯನ್ನು ಸಂಗ್ರಹಿಸಿ ಪ್ರಕಟಿಸಿರುವುದಲ್ಲದೆ, ಹಲವಾರು ಪುಸ್ತಕಗಳನ್ನು ರಚಿಸಿದ ಇವರು ಪ್ರಸಂಗಕರ್ತೃ ಕೂಡಾ ಆಗಿದ್ದರು.
ಕೆ.ಸಿ. ಪಾಟಾಳಿ ಅವರು ಪುತ್ತೂರಿನ ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನದ ಸ್ಥಾಪಕ ಸದಸ್ಯ ಹಾಗೂ ಗೌರವಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಕರ್ನಾಟಕದ ನಾನಾ ಕಡೆ ಶಾಲಾ ಕಲೋತ್ಸವಗಳಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದರು. ಇವರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.


