HEALTH TIPS

ಹೊರ್ಮುಜ್‌ ಜಲಸಂಧಿಯ ಮೇಲಿನ ನಿಯಂತ್ರಣ ಬಿಟ್ಟುಕೊಡುವುದಿಲ್ಲ: ಇರಾನ್‌ ಸ್ಪಷ್ಟನೆ

 ಟೆಹರಾನ್‌: ಹೊರ್ಮುಜ್‌ ಜಲಸಂಧಿಯ ಮೇಲಿನ ನಿಯಂತ್ರಣವನ್ನು ಬಿಟ್ಟುಕೊಡುವುದಿಲ್ಲ. ಅಮೆರಿಕದೊಂದಿಗಿನ ಶಾಂತಿ ಒಪ್ಪಂದದ ಕರಡು ಪ್ರತಿಯಲ್ಲೂ ಈ ಬಗ್ಗೆ ಪ್ರಸ್ತಾಪಿಸಿಲ್ಲ ಎಂದು ಇರಾನ್‌ ಸ್ಪಷ್ಟಪಡಿಸಿದೆ.


'ಅಮೆರಿಕ ಮತ್ತು ಇಸ್ರೇಲ್‌ನ ಸೇನಾ ದಾಳಿಗಿಂತ ಮೊದಲು ಇದ್ದ ಪರಿಸ್ಥಿತಿಯ ಪುನರ್‌ಸ್ಥಾಪನೆ ಅಥವಾ ಜಲಸಂಧಿಯ ನಿರ್ವಹಣೆಯನ್ನು ಬಿಟ್ಟುಕೊಡುವ ಅಂಶಗಳನ್ನು ಕರಡು ಪ್ರತಿಯಲ್ಲಿ ಇರಾನ್‌ ಸೇರಿಸಿಲ್ಲ' ಎಂದು ಪ್ರಸ್ತುತ ಅಂತಿಮಗೊಳ್ಳುತ್ತಿರುವ ಕರಡನ್ನು ಉಲ್ಲೇಖಿಸಿ ಇಸ್ಲಾಮಿಕ್‌ ರಿಪಬ್ಲಿಕ್‌ ನ್ಯೂಸ್‌ ಏಜೆನ್ಸಿ (ಐಆರ್‌ಎನ್‌ಎ) ವರದಿ ಮಾಡಿದೆ.

'ಇಸ್ಲಾಮಿಕ್‌ ಗಣರಾಜ್ಯದ ಮೂಲಭೂತ ತತ್ವಗಳ ಚೌಕಟ್ಟಿನೊಳಗೆ ಮಾತ್ರ ಪರಮಾಣು ಕಾರ್ಯಕ್ರಮದ ಬಗ್ಗೆ ಮಾತುಕತೆ ನಡೆಸುತ್ತದೆ. ಸಮೃದ್ಧೀಕರಿಸಿದ ಯುರೇನಿಯಂ ಹಕ್ಕನ್ನು ತನ್ನಲ್ಲೇ ಉಳಿಸಿಕೊಳ್ಳುವ ಅಂಶವನ್ನು ಅಂತಿಮ ಒಪ್ಪಂದದಲ್ಲಿ ಸೇರಿಸಲು ಇರಾನ್‌ ಆದ್ಯತೆ ನೀಡುತ್ತದೆ' ಎಂದು ಹೇಳಿದೆ.

ಫೆಬ್ರುವರಿ 28ರಂದು ಅಮೆರಿಕ ಮತ್ತು ಇಸ್ರೇಲ್‌ನೊಂದಿಗೆ ಯುದ್ಧ ಆರಂಭವಾದಾಗಿನಿಂದ, ಹೊರ್ಮುಜ್‌ ಜಲಸಂಧಿಯ ಮೇಲೆ ಇರಾನ್‌ ನಿಯಂತ್ರಣ ಸಾಧಿಸಿದೆ. ಈ ಮಾರ್ಗದ ಮೂಲಕ ಹಡಗುಗಳು ಹಾದು ಹೋಗಬೇಕಾದರೆ ಸೇನೆಯ ಒಪ್ಪಿಗೆ ಪಡೆಯಬೇಕು ಎಂದು ಇರಾನ್‌ ಹೇಳಿತ್ತು.

'ಶಾಂತಿ ಒಪ್ಪಂದದ ಕರಡನ್ನು ಅಂತಿಮಗೊಳಿಸಲಾಗುತ್ತಿದೆ' ಎಂದು ಇರಾನ್‌ನ ಸಮಾಲೋಚನಾ ತಂಡದವರ ಮೂಲವನ್ನು ಉಲ್ಲೇಖಿಸಿ 'ಮೆಹರ್‌' ಸುದ್ದಿ ಸಂಸ್ಥೆ ವರದಿ ಮಾಡಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries