HEALTH TIPS

ಸುರಕ್ಷಿತ ಆಹಾರ ಪದ್ಧತಿ, ಆರೋಗ್ಯ ರಕ್ಷಣೆ: ಜಿಲ್ಲಾ ಆಹಾರ ಸುರಕ್ಷತಾ ಇಲಾಖೆಯಿಂದ ಸೈಕ್ಲೋಥಾನ್

ಕಾಸರಗೋಡು: ಸುರಕ್ಷಿತ ಆಹಾರ ಪದ್ಧತಿ ಮತ್ತು ಆರೋಗ್ಯ ರಕ್ಷಣೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲಾ ಆಹಾರ ಸುರಕ್ಷತಾ ಇಲಾಖೆ ಮತ್ತು 'ಕಾಸರಗೋಡು ಪೆಡಲರ್ಸ್ ಕ್ಲಬ್' ಜಂಟಿಯಾಗಿ ಆಯೋಜಿಸಿದ್ದ ಸೈಕ್ಲೋಥಾನ್ ಆಯೋಜಿಸಲಯಿತು. 


ಈ ವರ್ಷದ ವಿಶ್ವ ಆಹಾರ ಸುರಕ್ಷತಾ ದಿನದ ಸಂದೇಶವನ್ನು ಗಮನದಲ್ಲಿಟ್ಟುಕೊಂಡು ಸೈಕ್ಲೋಥಾನ್  ಆಯೋಜಿಸಲಾಗಿತ್ತು.  ಕಾಞಂಗಾಡ್ ಹಳೇ ಬಸ್ ನಿಲ್ದಾಣದ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಞಂಗಾಡ್ ಕಂದಾಯ ವಿಭಾಗೀಯ ಅಧಿಕಾರಿ ಕೆ.ಆರ್. ಮನೋಜ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾಸರಗೋಡು ಆಹಾರ ಸುರಕ್ಷತಾ ಸಹಾಯಕ ಆಯುಕ್ತ ಸಂಗೀತ್ ಎಸ್. ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯಾದ್ಯಂತ ಆಹಾರ ಸುರಕ್ಷತಾ ಮಾನದಂಡಗಳನ್ನು ಖಚಿತಪಡಿಸಿಕೊಳ್ಳಲು ಮತ್ತು ಜನರಿಗೆ ಸುರಕ್ಷಿತ ಆಹಾರವನ್ನು ಒದಗಿಸಲು ಇಲಾಖೆ ಜಾರಿಗೆ ತಂದಿರುವ ವಿವಿಧ ಉಪಕ್ರಮಗಳ ಕುರಿತು ಮಾಹಿತಿ ನೀಡಲಾಯಿತು.   


'ಕಾಸರ್‍ಗೋಡ್ ಪೆಡಲರ್ಸ್ ಕ್ಲಬ್' ನ ಹಲವಾರು ಸೈಕ್ಲಿಸ್ಟ್‍ಗಳು ಮತ್ತು ಸಾರ್ವಜನಿಕರು ಆಹಾರ ಸುರಕ್ಷತಾ ಸಂದೇಶಗಳನ್ನು ಹೊಂದಿರುವ ಫಲಕ ಸೈಕಲಲ್ಲಿ ಅಳವಡಿಸುವಮೂಲಕ ರ್ಯಾಲಿಯಲ್ಲಿ ಭಾಗವಹಿಸಿದ್ದರು.

ಆಹಾರ ಸುರಕ್ಷತಾ ದಿನದ ಸಂದರ್ಭದಲ್ಲಿ ಜೂನ್ 11 ರಂದು ಸಿವಿಲ್‍ಸ್ಟೇಶನ್‍ನಲ್ಲಿ  ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಮತ್ತು ಪೆÇೀಸ್ಟರ್ ಸ್ಪರ್ಧೆಯನ್ನು ನಡೆಸಲಾಗುವುದು.ಜೂನ್ 12 ರಂದು ಜಿಲ್ಲಾ ಯೋಜನಾ ಕಚೇರಿ ಸಭಾಂಗಣದಲ್ಲಿ ನಡೆಯಲಿರುವ ಪ್ರಸ್ತುತಿ ಸ್ಪರ್ಧೆಗಳು, ಫಲಕ ಚರ್ಚೆಗಳು ಮತ್ತು ವಿಚಾರ ಸಂಕಿರಣ ನಡೆಯಲಿರುವುದು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries