ಕಾಸರಗೋಡು: ದುಬೈ ತೆರೆಳಲು ಮನೆಯಿಂದ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಯುವಕ ನಾಪತ್ತೆಯಾಗಿರುವ ಬಗ್ಗೆ ಕಾಸರಗೋಡು ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ವಿದ್ಯಾನಗರ ಬೆದಿರ ಖಲೀಲ್ ಹೌಸ್ನ ಎ.ಎ. ಉಬೈಸ್ (26) ನಾಪತ್ತೆಯಾದ ಯುವಕ. ಈ ಬಗ್ಗೆ ಉಬೈಸ್ ಅವರ ತಾಯಿ ನೀಡಿದ ದೂರಿನನ್ವಯ ಈ ಕೇಸು ದಾಖಲಾಗಿದೆ.
ದುಬೈ ತೆರಳಲು ಜೂನ್ 22ರಂದು ಸಂಜೆ 4ಕ್ಕೆ ಉಬೈಸ್ ಮನೆಯಿಂದ ಹೊರಟಿದ್ದರು. ಮಂಗಳೂರು ವಿಮಾನ ನಿಲ್ದಾಣದಿಂದ ಪ್ರಯಾಣಿಸುವುದಾಗಿ ಉಬೈಸ್ ಮನೆಯವರಲ್ಲಿ ತಿಳಿಸಿದ್ದರು. ಆದರೆ ಮನೆಯಿಂದ ಹೊರಟ ನಂತರ ಉಬೈಸ್ನ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಪೆÇಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

