ಕಾಸರಗೋಡು: ಜಿಲ್ಲಾ ಪೋಲೀಸ್ ಕಾಸರಗೋಡು, ನಶೆ ಮುಕ್ತ ಭಾರತ ಅಭಿಯಾನ ಕಾಸರಗೋಡು ವತಿಯಿಂದ'ನಾನು ತೂಫಾನ್ ಯೋಧ' ಕಾರ್ಯಕ್ರಮದನ್ವಯ 2000 ವಿದ್ಯಾರ್ಥಿಗಳಿಂದ ಡ್ರಗ್ಸ್ ವಿರುದ್ಧ ಮಾನವ ರಚನೆ ಜೂ. 25ರಂದು ಬೆಳಗ್ಗೆ 8.30ಕ್ಕೆ ಕಾಸರಗೋಡು ವಿದ್ಯಾನಗರದ ನಗರಸಭಾ ಸ್ಟೇಡಿಯಂನಲ್ಲಿ ಜರುಗಲಿದೆ. 'ನಾನೊಬ್ಬ ತೂಫಾನ್ ಯೋಧ-ನಾನು ಡ್ರಗ್ಸ್ ದ್ವೇಷಿಸುತ್ತೇನೆ' ಎಂಬಘೋಷಣೆಯೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಂಸದ ರಾಜಮೋಹನ್ ಉನ್ಣಿತ್ತಾನ್, ಶಾಸಕ ಕಲ್ಲಟ್ರ ಮಾಹಿನ್ ಹಾಜಿ, ಕಾಸರಗೋಡು ಜಿಪಂ ಅಧ್ಯಕ್ಷ ಸಾಬು ಅಬ್ರಹಾಂ, ಕಾಸರಗೋಡು ನಗರಸಭಾ ಅಧ್ಯಕ್ಷೆ ಶಾಹಿನಾ ಸಲೀಂ, ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಧಿನ್ ರಾಜ್ ಐಪಿಎಸ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಎಂ. ದೇವದಾಸನ್, ಜಿಲ್ಲಾ ಶಿಕ್ಷಣ ಉಪ ನಿರ್ದೇಶಕಿ ಶೈಲಾ ಟಿ, ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಆರ್ಯ ಪಿ ರಾಜ್ ಕೆಎಎಸ್ ಅತಿಥಿಗಳಾಗಿ ಭಾಗವಹಿಸುವರು.
ಕಾರ್ಯಕ್ರಮದ ಅಂಗವಾ ಮಾದಕ ದ್ರವ್ಯ ವಿರೋಧಿ ಪ್ರತಿಜ್ಞೆ, ಮಾದಕ ದ್ರವ್ಯ ವಿರೋಧಿ ಹಾಡು-ನೃತ್ಯ-ಯೋಗ ನಡೆಯಲಿರುವುದು.

.jpg)
.jpg)
