ತಿರುವನಂತಪುರಂ: ಅಧಿಕಾರಕ್ಕೆ ಬಂದ ಒಂದು ತಿಂಗಳೊಳಗೆ ಯುಡಿಎಫ್ ಇಂದಿರಾ ಗ್ಯಾರಂಟಿಯನ್ನು ಜಾರಿಗೆ ತಂದಿದೆ ಎಂದು ಸಂಸದ ಕೆಸಿ ವೇಣುಗೋಪಾಲ್ ಹೇಳಿದರು.
ಕೇರಳದಾದ್ಯಂತ ಮಹಿಳೆಯರು ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು.ಈ ಮೂಲಕ ಅವರು ಪ್ರತಿ ತಿಂಗಳು ಸಾವಿರಾರು ರೂಪಾಯಿಗಳನ್ನು ಉಳಿಸಬಹುದು. ನಾವು ಜನರ ಕಲ್ಯಾಣದಲ್ಲಿ ನಂಬಿಕೆ ಇಡುತ್ತೇವೆ. ನಾವು ಯಾವಾಗಲೂ ನಮ್ಮ ಭರವಸೆಗಳನ್ನು ಉಳಿಸಿಕೊಳ್ಳುತ್ತೇವೆ. ಕರ್ನಾಟಕ, ತೆಲಂಗಾಣ ಅಥವಾ ಈಗ ಕೇರಳದಲ್ಲಿರಲಿ,ಜನ ಕಲ್ಯಾಣ ನಮ್ಮ ಲಕ್ಷ್ಯವೆಂದು ಕೆಸಿ ವೇಣುಗೋಪಾಲ್ ಸ್ಪಷ್ಟಪಡಿಸಿದರು.
ತಿರುವನಂತಪುರದಲ್ಲಿ ಆರ್.ಎಸ್.ಎಸ್. ಶತಮಾನೋತ್ಸವದ ಅಂಗವಾಗಿ ಆಯೋಜಿಸಲಾದ ಉಪನ್ಯಾಸದಲ್ಲಿ ಕೇರಳದ ಮೂವರು ಉಪಕುಲಪತಿಗಳು ಭಾಗವಹಿಸಿದ್ದನ್ನು ಕೆಸಿ ವೇಣುಗೋಪಾಲ್ ಟೀಕಿಸಿದರು. ಆರ್.ಎಸ್.ಎಸ್. ಸಿದ್ಧಾಂತವನ್ನು ಮನಸ್ಸಿನಲ್ಲಿಟ್ಟುಕೊಂಡವರು, ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ದ್ರೋಹ ಬಗೆದವರು ಮತ್ತು ತಮ್ಮ ಜಾತ್ಯತೀತ ನಂಬಿಕೆಗಳನ್ನು ತ್ಯಾಗ ಮಾಡಿದವರು, ಶ್ರೇಷ್ಠ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾಗಲು ಸ್ವಲ್ಪವೂ ಅರ್ಹರಲ್ಲ. ಈ ಮೂವರು ರಾಜೀನಾಮೆ ನೀಡಿ ರಾಜ್ಯಪಾಲರ ರಕ್ಷಣೆಯಿಂದ ಆರ್‍ಎಸ್‍ಎಸ್ ಮುಖ್ಯಸ್ಥರ ನೆರಳಿಗೆ ಹೋಗುವುದು ಉತ್ತಮ ಎಂದು ಕೆ.ಸಿ. ವೇಣುಗೋಪಾಲ್ ಹೇಳಿದರು.

