ಶಿವಪುರಿ: ರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರ ಜನ್ಮದಿನಾಚರಣೆಯ ಅಂಗವಾಗಿ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ, ಚಂಬಲ್‌ನ ಮಾಜಿ ದರೋಡೆಕೋರ ರಾಂಬಾಬು ಗಡರಿಯಾ ಅವರ ಭಾವಚಿತ್ರಕ್ಕೆ ಬಿಜೆಪಿ ಶಾಸಕರೊಬ್ಬರು ಹಾರ ಹಾಕಿದ್ದು ವಿವಾದಕ್ಕೆ ಕಾರಣವಾಗಿದೆ.
ರಸ್ತೆ ಅಪಘಾತದಿಂದ ರಕ್ಷಿಸಲು ರೈತರಿಗೆ ಉಚಿತ ಹೆಲ್ಮೆಟ್ ವಿತರಣೆ: ಮಧ್ಯಪ್ರದೇಶ ಸಿಎಂ
ಪಿಚ್ಹೋರ್ ಪಟ್ಟಣದಲ್ಲಿ ಪಾಲ್-ಬಾಘೇಲ್ ಸಮುದಾಯದ ವತಿಯಿಂದ ಭಾನುವಾರ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ವೇದಿಕೆಯ ಮೇಲೆ ಅಹಲ್ಯಾಬಾಯಿ ಹೋಳ್ಕರ್ ಮತ್ತು ಗಡರಿಯಾ ಅವರ ಭಾವಚಿತ್ರಗಳನ್ನು ಇಡಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪಿಚ್ಹೋರ್ ಶಾಸಕ ಪ್ರೀತಮ್ ಲೋಧಿ ಅವರು ಎರಡೂ ಭಾವಚಿತ್ರಗಳಿಗೆ ಹಾರ ಹಾಕಿದ್ದಾರೆ.
ಇದು ತಮ್ಮ ಹಳೆಯ ಸಹವರ್ತಿಗೆ ಗೌರವ ಸಲ್ಲಿಸಲು ಸಿಕ್ಕ ಅವಕಾಶ ಎಂದು ಕುಖ್ಯಾತ ಮಾಜಿ ದರೋಡೆಕೋರನ ಭಾವಚಿತ್ರಕ್ಕೆ ಹಾರ ಹಾಕಿದ್ದನ್ನು ಲೋಧಿ ಅವರು ಸಮರ್ಥಿಸಿಕೊಂಡಿದ್ದು, ಟೀಕೆಗೆ ಕಾರಣವಾಗಿದೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ಲೋಧಿ, ಗಡರಿಯಾ ಅವರು ನನ್ನ 'ಸುಖ-ದುಃಖಗಳಲ್ಲಿ ಒಡನಾಡಿಯಾಗಿದ್ದರು. ಅವರ ಜೀವನದ ಹೋರಾಟಗಳನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಸಮಾಜ ಮತ್ತು ಸಂದರ್ಭಗಳು ಗಡರಿಯಾ ಅವರನ್ನು ಅಪರಾಧದ ಹಾದಿ ಹಿಡಿಯುವಂತಹ ಪರಿಸ್ಥಿತಿಗೆ ತಳ್ಳಿದವು ಎಂದು ಅವರು ಹೇಳಿದ್ದಾರೆ.
ಟ್ವಿಶಾ ಶರ್ಮಾ ಸಾವು ಪ್ರಕರಣ: ಸಿಬಿಐ ತನಿಖೆಗೆ ಮಧ್ಯಪ್ರದೇಶ ಸಿಎಂ ಒಪ್ಪಿಗೆ
ಗಡರಿಯಾ ಅವರ ಜೀವನದಲ್ಲಿ ಪ್ರತಿಕೂಲ ಪರಿಸ್ಥಿತಿಗಳು ಎದುರಾಗದಿದ್ದರೆ ಅವರು ದರೋಡೆಕೋರರಾಗುತ್ತಿರಲಿಲ್ಲ ಎಂದೂ ಲೋಧಿ ಹೇಳಿದರು. ಅಪರಾಧಿಗಳು ಮತ್ತು ದರೋಡೆಕೋರರು ಸಹ ಮನುಷ್ಯರೇ ಆಗಿದ್ದು, ಅವರ ಜೀವನದ ಸಂದರ್ಭಗಳನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ ಎಂದು ಶಾಸಕರು ಹೇಳಿದರು.
ಅಹಲ್ಯಾಬಾಯಿ ಹೋಳ್ಕರ್ ಅವರಿಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಅಪರಾಧ ಲೋಕಕ್ಕೆ ಸೇರಿದ ವ್ಯಕ್ತಿಯನ್ನು ಗೌರವಿಸುವ ಔಚಿತ್ಯವನ್ನು ಹಲವಾರು ಜನರು ಪ್ರಶ್ನಿಸಿದ್ದಾರೆ. ಗೌರವಾನ್ವಿತ ವ್ಯಕ್ತಿಯ ಪಕ್ಕದಲ್ಲಿ ಕುಖ್ಯಾತ ಅಪರಾಧಿಯ ಭಾವಚಿತ್ರವನ್ನು ಇಟ್ಟಿರುವುದು ಖಂಡನೀಯ ಎಂದು ಕಾಂಗ್ರೆಸ್‌ನ ಸ್ಥಳೀಯ ಘಟಕದ ಅಧ್ಯಕ್ಷ ಸಾಹಬ್ ಸಿಂಗ್ ಕುಶ್ವಾಹ ಹೇಳಿದ್ದಾರೆ.

