HEALTH TIPS

ಕೊನೆಗೂ ತೆರೆಯಿತು ಸಿಬಿಎಸ್‌ಇ ಪೋರ್ಟಲ್: ಅರ್ಜಿ ಸಲ್ಲಿಕೆ ಹೇಗೆ? ಎಂಬಿತ್ಯಾದಿ ವಿವರ

 ನವದೆಹಲಿ: 12ನೇ ತರಗತಿಯ ಉತ್ತರ ಪತ್ರಿಕೆಗಳ ಪರಿಶೀಲನೆ ಮತ್ತು ಮರುಮೌಲ್ಯಮಾಪನ ಸೇರಿದಂತೆ ಫಲಿತಾಂಶದ ನಂತರದ ಚಟುವಟಿಕೆಗಳಿಗಾಗಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) ಪೋರ್ಟಲ್‌ ಮಂಗಳವಾರ ಕಾರ್ಯಾರಂಭ ಮಾಡಿದೆ.


ಡಿಜಿಟಲ್ ಮೌಲ್ಯಮಾಪನಕ್ಕಾಗಿ ಪರಿಚಯಿಸಲಾದ 'ಆನ್ ಸ್ಕ್ರೀನ್ ಮಾರ್ಕಿಂಗ್' (ಒಎಸ್‌ಎಂ) ವ್ಯವಸ್ಥೆ- ಆನ್‌ಮಾರ್ಕ್ ಪೋರ್ಟಲ್‌ನಲ್ಲಿ ದೋಷ ಕಂಡುಬಂದಿತ್ತು.

ಈ ಕುರಿತು ದೇಶದಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ನಿಗದಿತ ದಿನಾಂಕಕ್ಕಿಂತ ಕೆಲವು ದಿನಗಳ ತಡವಾಗಿ ಈ ಪೋರ್ಟಲ್ ಅನ್ನು ಸಿಬಿಎಸ್‌ಇ ಆರಂಭಿಸಿದೆ.

ವಿದ್ಯಾರ್ಥಿಗಳು ಈಗಾಗಲೇ ಮೌಲ್ಯಮಾಪನ ಮಾಡಿದ ಉತ್ತರ ಪತ್ರಿಕೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಪಡೆದಿದ್ದು, ವ್ಯತ್ಯಾಸಗಳ ಪರಿಶೀಲನೆ ಅಥವಾ ಮರುಮೌಲ್ಯಮಾಪನಕ್ಕಾಗಿ ಮೀಸಲಾದ ಅಧಿಕೃತ ಪೋರ್ಟಲ್ cbse.gov.in/newsite_old/rchk.html  ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಸಿಬಿಎಸ್‌ಇ ಅಧಿಸೂಚನೆಯಲ್ಲಿ ತಿಳಿಸಿದೆ.

ಈ ಪೋರ್ಟಲ್ ಜೂನ್ 6ರ (ಶನಿವಾರ) ಮಧ್ಯರಾತ್ರಿಯವರೆಗೆ ತೆರೆದಿರುತ್ತದೆ ಎಂದೂ ಸಿಬಿಎಸ್‌ಇ ಮಾಹಿತಿ ನೀಡಿದೆ. ಆದಾಗ್ಯೂ, ಶುಲ್ಕ ಪಾವತಿ ಪ್ರಕ್ರಿಯೆ ಪೂರ್ಣಗೊಳಿಸಿದ್ದರೂ ಸಹ ಇನ್ನೂ ಉತ್ತರ ಪತ್ರಿಕೆಗಳ ಸ್ಕ್ಯಾನ್ ಮಾಡಿದ ಪ್ರತಿಗಳಿಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಸಿಬಿಎಸ್‌ಇ ಯಾವುದೇ ಸ್ಪಷ್ಟನೆ ನೀಡಿಲ್ಲ.

ವಿದ್ಯಾರ್ಥಿಗಳು ಯಾವ ಸಮಸ್ಯೆ ವರದಿ ಮಾಡಬಹುದು?

ಸ್ಕ್ಯಾನ್ ಮಾಡಿದ ಉತ್ತರ ಪತ್ರಿಕೆಗಳಲ್ಲಿ ಕಂಡುಬರುವ ವ್ಯತ್ಯಾಸಗಳ ಬಗ್ಗೆ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಲು ಮತ್ತು ನಿರ್ದಿಷ್ಟ ವಿಷಯಗಳ ಉತ್ತರಪತ್ರಿಕೆಗಳ ಮರುಮೌಲ್ಯಮಾಪನ್ಕೆ ಅರ್ಜಿ ಸಲ್ಲಿಸಲು ಈ ಪೋರ್ಟಲ್‌ನಲ್ಲಿ ಅವಕಾಶವಿದೆ.

ಪುಟಗಳು ಕಾಣೆಯಾಗಿರುವುದು, ಹೆಚ್ಚುವರಿ ಉತ್ತರ ಪತ್ರಿಕೆಗಳು ಇಲ್ಲದಿರುವಿಕೆ, ಮಸುಕಾದ ಸ್ಕ್ಯಾನ್‌ ಪ್ರತಿಗಳು, ನಕ್ಷೆ ಅಥವಾ ಗ್ರಾಫ್‌ ಕಾಣೆಯಾಗಿರುವುದು, ತಪ್ಪು ಉತ್ತರ ಪತ್ರಿಕೆಗಳನ್ನು ಅಪ್‌ಲೋಡ್ ಮಾಡಿರುವುದು ಅಥವಾ ತಪ್ಪು ಪ್ರಶ್ನೆ ಪತ್ರಿಕೆಯ ಸೆಟ್‌ಗೆ ಅನುಗುಣವಾಗಿ ಮೌಲ್ಯಮಾಪನ ಮಾಡಿರುವುದು ಮುಂತಾದ ಸಮಸ್ಯೆಗಳನ್ನು ವಿದ್ಯಾರ್ಥಿಗಳು ವರದಿ ಮಾಡಬಹುದಾಗಿದೆ.

ತಮ್ಮ ಉತ್ತರಗಳನ್ನು ಸರಿಯಾಗಿ ಮೌಲ್ಯಮಾಪನ ಮಾಡಲಾಗಿಲ್ಲ ಎಂದು ಭಾವಿಸುವ ವಿದ್ಯಾರ್ಥಿಗಳು, ಒಂದು ಅಥವಾ ಅದಕ್ಕಿಂತ ಹೆಚ್ಚು ಉತ್ತರಗಳ ಮರುಪರಿಶೀಲನೆಗೂ ಮನವಿ ಮಾಡಬಹುದು.

ಅರ್ಜಿ ಸಲ್ಲಿಸುವುದು ಹೇಗೆ?

ವಿದ್ಯಾರ್ಥಿಗಳು ಅಧಿಕೃತ ಸಿಬಿಎಸ್‌ಇ ಮರುಮೌಲ್ಯಮಾಪನ ಪೋರ್ಟಲ್‌ಗೆ ಭೇಟಿ ನೀಡಿ, ಅಗತ್ಯ ವಿವರಗಳನ್ನು ಸಲ್ಲಿಸಿ ಲಾಗ್‌ ಇನ್‌ ಆಗಬೇಕು.

* ವಿಷಯವನ್ನು (Subರಿeಛಿಣ) ಆಯ್ಕೆ ಮಾಡಿಬೇಕು ಮತ್ತು ವ್ಯತ್ಯಾಸ ಪರಿಶೀಲನೆ ಅಥವಾ ಮರುಮೌಲ್ಯಮಾಪನ ಇವುಗಳಲ್ಲಿ ಒಂದನ್ನು ಆರಿಸಿಕೊಳ್ಳಬೇಕು.

* ಮರುಮೌಲ್ಯಮಾಪನ ವಿನಂತಿಗಾಗಿ, ಸಂಬಂಧಿತ ಪ್ರಶ್ನೆ ಸಂಖ್ಯೆ ಮತ್ತು ಪುಟದ ಸಂಖ್ಯೆಯನ್ನು ನಮೂದಿಸಬೇಕು.

* ಅರ್ಜಿ ಸಲ್ಲಿಕೆ ಮಾಡುವ ಮುನ್ನ ವಿವರಗಳನ್ನು ಪರಿಶೀಲಿಸಿ, ಏಕೆಂದರೆ ಒಮ್ಮೆ ಅರ್ಜಿ ಸಲ್ಲಿಕೆಯಾದ ನಂತರ ವಿವರಗಳನ್ನು ತಿದ್ದುಪಡಿ ಮಾಡಲು ಅವಕಾಶ ಇರುವುದಿಲ್ಲ.

* ನಿಗದಿತ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿಬೇಕು.

ವಿದ್ಯಾರ್ಥಿಗಳು ಒಂದೇ ಅರ್ಜಿಯ ಮೂಲಕ ವಿವಿಧ ವಿಷಯಗಳಲ್ಲಿನ ಹಲವು ವ್ಯತ್ಯಾಸಗಳನ್ನು ವರದಿ ಮಾಡಬಹುದು. ಆದರೆ, ಮರುಮೌಲ್ಯಮಾಪನಕ್ಕಾಗಿ ಪ್ರತಿ ಅಭ್ಯರ್ಥಿಗೆ ಕೇವಲ ಒಂದು ಅರ್ಜಿಗೆ ಮಾತ್ರ ಅವಕಾಶವಿರುತ್ತದೆ.

ಭದ್ರತಾ ಉದ್ದೇಶಕ್ಕಾಗಿ 'ಆಧಾರ್' ಸಲ್ಲಿಕೆ ಕಡ್ಡಾಯಗೊಳಿಸಲಾಗಿದೆ ಎಂದು ಸಿಬಿಎಸ್‌ಇ ಸ್ಪಷ್ಟಪಡಿಸಿದೆ. ಒಂದು ವೇಳೆ ವಿದ್ಯಾರ್ಥಿಯ ಬಳಿ ಆಧಾರ್ ಕಾರ್ಡ್ ಇಲ್ಲದ ಸಂದರ್ಭಗಳಲ್ಲಿ ಪೋಷಕರು ಅಥವಾ ಸಂಬಂಧಿಕರ ಆಧಾರ್ ವಿವರ ಬಳಸಬಹುದು. ಆದರೆ, ಪರಿಶೀಲನೆ ಪ್ರಕ್ರಿಯೆಯಲ್ಲಿ ನಮೂದಿಸುವ ಹೆಸರು, ಜನ್ಮ ದಿನಾಂಕ ಮತ್ತು ಲಿಂಗ ಯಾರ ಆಧಾರ್ ಸಂಖ್ಯೆಯನ್ನು ಬಳಸಲಾಗುತ್ತಿದೆಯೋ ಅವರ ವಿವರಗಳಿಗೆ ಹೊಂದಿಕೆಯಾಗಬೇಕು.

ಶುಲ್ಕ ವಿವರ...

ಸಮಸ್ಯೆಗಳ ಪರಿಶೀಲನೆ ಮತ್ತು ಮರುಮೌಲ್ಯಮಾಪನ ಎರಡರ ಪೋರ್ಟಲ್ ಅನ್ನು ಜೂನ್ 2ರಿಂದ ತೆರೆಯಲಾಗಿದ್ದು, ಜೂನ್ 6ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಯಾವುದೇ ಆಫ್‌ಲೈನ್ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಎಂದು ಸಿಬಿಎಸ್‌ಇ ತಿಳಿಸಿದೆ.

ಸ್ಕ್ಯಾನ್ ಮಾಡಿದ ಪ್ರತಿಗಳಲ್ಲಿನ ಸಮಸ್ಯೆ ಪರಿಶೀಲನೆಗೆ: ಪ್ರತಿ ಪತ್ರಿಕೆಯ ಛಾಯಾಪ್ರತಿಗೆ ₹100

ಮರುಮೌಲ್ಯಮಾಪನಕ್ಕೆ: ಪ್ರತಿ ಪ್ರಶ್ನೆಗೆ ₹25

ಶುಲ್ಕವನ್ನು ಯುಪಿಐ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು. 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries