HEALTH TIPS

ಭಾರತದ ಆಹಾರ ಉತ್ಪನ್ನ ವಿದೇಶಗಳಲ್ಲೇಕೆ ನಿಷೇಧ?: ಕೇಂದ್ರ ಸರ್ಕಾರ ಹೇಳುವುದೇನು?

ಭಾರತದ ಹಣ್ಣು, ತರಕಾರಿ, ಆಹಾರ ಉತ್ಪನ್ನಗಳು ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ನಿರಾಕರಣೆಗೆ ಒಳಗಾಗಿವೆ. ಅವುಗಳಲ್ಲಿ ಕ್ಯಾನ್ಸರ್‌ಕಾರಕ ಕೀಟನಾಶಕಗಳು ಮತ್ತು ಭಾರ ಲೋಹದ ಅಂಶಗಳು ನಿಗದಿತ ಮಿತಿಗಿಂತ ಹೆಚ್ಚಾಗಿವೆ ಎಂದು ಐರೋಪ್ಯ ಒಕ್ಕೂಟ, ಜಪಾನ್, ಚೀನಾವು ಭಾರತದ ಕೆಲವು ಉತ್ಪನ್ನಗಳನ್ನು ತಿರಸ್ಕರಿಸಿವೆ.

ಕಳೆದ ವರ್ಷವೂ ಇದೇ ರೀತಿ ನಡೆದಿತ್ತು. ಆಹಾರ ಉತ್ಪನ್ನಗಳ ಸುರಕ್ಷತೆ ಖಾತ್ರಿಪಡಿಸಲು ಕಠಿಣ ನಿಯಮಾವಳಿ ರೂಪಿಸುವುದಾಗಿ ಕೇಂದ್ರ ಸರ್ಕಾರ ಆಗ ಹೇಳಿತ್ತು. ಆದರೆ, ಈ ವರ್ಷವೂ ಅದೇ ಪುನರಾವರ್ತನೆಯಾಗಿದೆ.

ಕೇಂದ್ರ ಸರ್ಕಾರ ಹೇಳುವುದೇನು?

  • ಆಹಾರ ಉತ್ಪನ್ನಗಳಲ್ಲಿ ಕೀಟನಾಶಕ ಪ್ರಮಾಣದ ಮೇಲೆ ನಿಗಾ ಇಡಲು ಮತ್ತು ವಿಷಕಾರಿ ಅಂಶದ ಪ್ರಮಾಣ ಎಷ್ಟಿದೆ ಎಂಬುದನ್ನು ಪತ್ತೆಹಚ್ಚಲು 2005-26ರಿಂದಲೂ 'ರಾಷ್ಟ್ರೀಯ ಮಟ್ಟದಲ್ಲಿ ಕೀಟನಾಶಕದ ಉಳಿಕೆ ಅಂಶದ ಮೇಲ್ವಿಚಾರಣೆ' (ಎಂಪಿಆರ್‌ಎನ್‌ಎಲ್‌) ಕಾರ್ಯಕ್ರಮ ಜಾರಿಯಲ್ಲಿದೆ.

  • ಈ ಕಾರ್ಯಕ್ರಮದ ಅಡಿಯಲ್ಲಿ ತರಕಾರಿಗಳು, ಹಣ್ಣುಗಳು, ಮಸಾಲೆ ಪದಾರ್ಥಗಳು, ಧಾನ್ಯಗಳು, ಬೇಳೆಕಾಳುಗಳು, ಗಿಡಮೂಲಿಕೆಗಳು, ಮೀನು, ಮಾಂಸ, ಮೊಟ್ಟೆ, ಚಹಾ, ಹಾಲು ಸೇರಿದಂತೆ ಎಲ್ಲ ಆಹಾರ ವಸ್ತುಗಳ ಮಾದರಿಗಳನ್ನು ದೇಶದ ವಿವಿಧ ಭಾಗಗಳಿಂದ ಸಂಗ್ರಹಿಸಿ, ಪರೀಕ್ಷೆ ಮತ್ತು ಮಾಪನಾಂಕ ಪ್ರಯೋಗಾಲಯಗಳ ರಾಷ್ಟ್ರೀಯ ಮಾನ್ಯತಾ ಮಂಡಳಿಯು ವಿಶ್ಲೇಷಣೆಗೆ ಒಳಪಡಿಸುತ್ತದೆ.

  • ಕೀಟನಾಶಕಗಳ ಬಳಕೆ ಮತ್ತು ಸುರಕ್ಷಿತ ನಿರ್ವಹಣೆ ಬಗ್ಗೆ ರೈತರು, ರಾಜ್ಯ ಕೃಷಿ ವಿಸ್ತರಣೆ ಅಧಿಕಾರಿಗಳು, ಕ್ರಿಮಿನಾಶಕಗಳ ಮಾರಾಟಗಾರರಲ್ಲಿ ಜಾಗೃತಿ ಮೂಡಿಸಲು ಮತ್ತು ತರಬೇತಿ ನೀಡಲು ಕೃಷಿ ಸಚಿವಾಲಯವು ಕೇಂದ್ರ ಸಂಯೋಜಿತ ಕ್ರಿಮಿನಾಶಕ ನಿರ್ವಹಣಾ ಕೇಂದ್ರಗಳು, ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ರಾಜ್ಯ ಕೃಷಿ ಇಲಾಖೆಗಳ ಮೂಲಕ ವಿವಿಧ ರೀತಿಯ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಕೃಷಿ ಚಟುವಟಿಕೆಗಳಲ್ಲಿ ರಾಸಾಯನಿಕ ಕೀಟನಾಶಕಗಳ ಬಳಕೆ ಕೊನೆಯ ಆಯ್ಕೆಯಾಗಬೇಕು ಎಂಬುದನ್ನು ಪ್ರಚಾರ ಮಾಡಲಾಗುತ್ತಿದೆ.

ಕೀಟನಾಶಕ ಅಂಶಗಳ ಉಳಿಕೆ ಪ್ರಮಾಣವನ್ನು ಪರೀಕ್ಷಿಸುವುದಕ್ಕಾಗಿ ಎಫ್‌ಎಸ್‌ಎಸ್‌ಎಐ ಹಲವು ಕ್ರಮಗಳನ್ನು ಕೈಗೊಂಡಿದೆ

  1. ಈ ಪರೀಕ್ಷೆ ಮಾಡುವ ಸಾಮರ್ಥ್ಯವಿರುವ ಎಫ್‌ಎಸ್‌ಎಸ್‌ಎಐ ಅಧಿಸೂಚಿತ 159 ಪ್ರಯೋಗಾಲಯಗಳು ದೇಶದಲ್ಲಿವೆ

  2. ಪರೀಕ್ಷೆ ನಡೆಸಲು ಅನುಕೂಲವಾಗುವಂತೆ ಪ್ರಯೋಗಾಲಯಗಳಿಗೆ ಅತ್ಯಾಧುನಿಕ ಸಲಕರಣೆಗಳನ್ನು ಖರೀದಿ ಮಾಡುವುದಕ್ಕೆ ನೆರವಾಗಿದೆ

  3. ಹೆಚ್ಚುವರಿಯಾಗಿ ದೇಶದ 35 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಹಾರ ಉತ್ಪನ್ನಗಳ ಪರೀಕ್ಷೆಗಾಗಿ ಸಂಚಾರಿ ಪರೀಕ್ಷಾ ಪ್ರಯೋಗಾಲಯಗಳನ್ನು ನಿಯೋಜಿಸಲಾಗಿದೆ

ರೈತರಿಗೆ ಗುಣಮಟ್ಟದ ಕೀಟನಾಶಕಗಳನ್ನು ಪೂರೈಸಲು ಕೃಷಿ ಸಚಿವಾಲಯವು 1968ರ ಕೀಟನಾಶಕಗಳ ಕಾಯ್ದೆಯ ವಿವಿಧ ನಿಯಮಗಳನ್ನು ಜಾರಿಗೆ ತರಲಾಗಿದೆ. 1971ರ ಕೀಟನಾಶಕಗಳ ನಿಯಮಾವಳಿಗಳ ಅಡಿ ರಾಜ್ಯ ಸರ್ಕಾರಗಳ ಪರವಾನಗಿ ಇಲ್ಲದೇ ಯಾವುದೇ ಕೀಟ ನಾಶಕದ ತಯಾರಿಕೆ, ದಾಸ್ತಾನು, ಮಾರಾಟ ಮಾಡುವಂತಿಲ್ಲ. ಅಧಿಕಾರಿಗಳು ನಿಯಮಿತವಾಗಿ ಕೀಟನಾಶಕ ತಯಾರಿಕಾ ಕಂಪನಿಗಳು, ಡೀಲರ್‌ಗಳು/ಮಾರಾಟಗಾರರ ಸ್ಥಳಗಳಲ್ಲಿ ಪರಿಶೀಲನೆ ನಡೆಸುತ್ತಿರುತ್ತಾರೆ. ಗುಣಮಟ್ಟ ವಿಶ್ಲೇಷಣೆಗಾಗಿ ಕೀಟನಾಶಕಗಳ ಮಾದರಿ ಸಂಗ್ರಹಿಸಲಾಗುತ್ತದೆ. ಒಂದು ವೇಳೆ ಪರೀಕ್ಷೆಯಲ್ಲಿ ಕೀಟನಾಶಕದ ಮಾದರಿ ವಿಫಲವಾದರೆ ತಯಾರಕರು ಅಥವಾ ಡೀಲರ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಮಾರುಕಟ್ಟೆಯಲ್ಲಿ ಗುಣಮಟ್ಟದ ಕೀಟನಾಶಕಗಳು ಸಿಗುವಂತೆ ಮಾಡಲು ಕಾಯ್ದೆಯ 1968ರ ಸೆಕ್ಷನ್‌ 20 ಅಡಿಯಲ್ಲಿ ಸಂಬಂಧಿಸಿದ ಅಧಿಕಾರಿಗಳು ದಿಢೀರ್‌ ತಪಾಸಣೆ, ನಡೆಸುತ್ತಾರೆ. ಒಂದು ವೇಳೆ ಅಕ್ರಮ ಕಂಡು ಬಂದರೆ, ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ

ಸುಸ್ಥಿರ ಕೃಷಿಗೆ ಮತ್ತು ಸಮಗ್ರ ಕೀಟ ನಿರ್ವಹಣೆ ಕ್ರಮಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಜೈವಿಕ ಕೀಟನಾಶಕಗಳು ಮತ್ತು ಜೈವಿಕ ನಿಯಂತ್ರಣ ಏಜೆಂಟ್‌ಗಳ ಬಳಕೆಯನ್ನು ಪ್ರೋತ್ಸಾಹಿಸುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries