ಇಂತಹ ನಿಯಮವನ್ನು ಜಾರಿಗೆ ತಂದ ಮೊದಲ ಅರಬ್ ದೇಶ ಎಂಬ ಹೆಗ್ಗಳಿಕೆಗೆ ಯುಎಇ ಪಾತ್ರವಾಗಿದೆ.
ಹೊಸ ನಿಯಮದ ಪ್ರಕಾರ, 15 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವಂತಿಲ್ಲ ಹಾಗೂ ಖಾತೆಗಳನ್ನು ತೆರೆಯುವಂತಿಲ್ಲ. ಒಂದು ವೇಳೆ ಬಳಕೆ ಮಾಡಿದರೂ ಮಕ್ಕಳ ವಯಸ್ಸಿಗೆ ಸೂಕ್ತವಾದ ವಿಷಯಗಳು ಮಾತ್ರ ಕಾಣಿಸುವಂತೆ ನಿರ್ಬಂಧ ಹೇರಲಾಗಿದೆ. ಅಪರಿಚಿತರಿಗೆ ಸಂದೇಶ ಕಳಿಸದಂತೆ ಹಾಗೂ ಮಕ್ಕಳು ದಿನದಲ್ಲಿ ಎಷ್ಟು ಸಮಯ ಮೊಬೈಲ್ ನೋಡಬೇಕು ಹಾಗೂ ಮಕ್ಕಳ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪೋಷಕರ ಮೊಬೈಲ್‌ನಲ್ಲಿ ವಿಶೇಷ ಟೂಲ್ ಅನ್ನು ಅಳವಡಿಸಲಾಗಿರುತ್ತದೆ' ಎಂದು ಹೊಸ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಇನ್‌ಸ್ಟಾಗ್ರಾಮ್ ಸೇರಿದಂತೆ ಅನೇಕ ಸಾಮಾಜಿಕ ಮಾಧ್ಯಮಗಳು ಕಟ್ಟುನಿಟ್ಟಾದ ವಯಸ್ಸಿನ ಪರಿಶೀಲನೆಗೆ , ತಾಂತ್ರಿಕ ಸಿದ್ಧತೆಯನ್ನು ಖಚಿತಪಡಿಸಿಕೊಳ್ಳಲು ಸಂಬಂಧಿತ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ಯುವಕರು ಆನ್‌ಲೈನ್‌ನಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಇದರಿಂದ ಸೈಬರ್ ಅಪರಾಧ ಪ್ರಕರಣ ಹೆಚ್ಚುತ್ತಿದೆ. ಈ ಹಿನ್ನಲೆಯಲ್ಲಿ ಈ ನಿಯಮವನ್ನು ಕೈಗೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.
2024ರ ಸಮೀಕ್ಷೆಯ ಪ್ರಕಾರ, ಯುಎಇ ದೇಶದ ಮಕ್ಕಳು ದಿನದಲ್ಲಿ 3 ಗಂಟೆಗೂ ಹಚ್ಚು ಕಾಲ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಇದು ಅವರ ಮಾನಸಿಕ, ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇತ್ತೀಚೆಗೆ ಆಸ್ಟ್ರೇಲಿಯಾ ಮತ್ತು ಮಲೇಷ್ಯಾದಲ್ಲೂ ಕೂಡ ಮಕ್ಕಳು ಸಾಮಾಜಿಕ ಮಾಧ್ಯಮ ಬಳಸಲು ನಿರ್ಬಂಧ ಹೇರಲಾಗಿದೆ ಎಂದು ವರದಿ ತಿಳಿಸಿದೆ.

