ಟೆಲ್ ಅವಿವ್: ಇಸ್ರೇಲ್‌ನ ಒಬ್ಬ ತಾಯಿ ಸುರಿಸುವ ಪ್ರತಿ ಕಣ್ಣೀರಿಗೆ ಲೆಬನಾನ್‌ನ ಸಾವಿರ ತಾಯಂದಿರನ್ನು ಅಳುವಂತೆ ಮಾಡುತ್ತೇವೆ ಎಂದು ಸಚಿವರೊಬ್ಬರು ಗುಡುಗಿದ್ದಾರೆ.
'ಇಡೀ ಲೆಬನಾನ್ ಹೊತ್ತಿ ಉರಿದು ಸುಟ್ಟುಹೋಗಬೇಕು' ಎಂದು ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಸಚಿವ ಬೆನ್ ಗ್ವಿರ್ ಎಕ್ಸ್ ಪೋಸ್ಟ್ ಮೂಲಕ ಗುಡುಗಿದ್ದಾರೆ.
ಲೆಬನಾನ್‌ನಲ್ಲಿ ಕದನ ವಿರಾಮವನ್ನು ಒಳಗೊಂಡಂತೆ ಅಮೆರಿಕ ಮತ್ತು ಇರಾನ್ ನಡುವೆ ಸಹಿ ಹಾಕಲಾದ ಪ್ರಾಥಮಿಕ ಶಾಂತಿ ಒಪ್ಪಂದದ ಹೊರತಾಗಿಯೂ ಇಸ್ರೇಲ್ ಸರ್ಕಾರವು ದಾಳಿ ನಿಲ್ಲಿಸುವ ಉದ್ದೇಶ ಹೊಂದಿಲ್ಲ ಎಂಬ ಸುಳಿವನ್ನು ಸಚಿವರು ನೀಡಿದ್ದಾರೆ.
'ಇಸ್ರೇಲ್‌ನ ಒಬ್ಬ ತಾಯಿಯ ಪ್ರತಿ ಕಣ್ಣೀರಿಗೆ ಸಾವಿರ ಲೆಬನಾನಿನ ತಾಯಂದಿರು ಅಳಬೇಕು. ಇಡೀ ಲೆಬನಾನ್ ಹೊತ್ತಿ ಉರಿದು ಸುಟ್ಟುಹೋಗಬೇಕು!'ಎಂದು ಗ್ವಿರ್ ಹೀಬ್ರೂ ಭಾಷೆಯಲ್ಲಿ ಪೋಸ್ಟ್ ಮಾಡಿದ್ದಾರೆ.
'ನಮ್ಮ ಪುತ್ರರ ರಕ್ತ ಮತ್ತು ಭದ್ರತಾ ಸಿಬ್ಬಂದಿಯ ತ್ಯಾಗ ವ್ಯರ್ಥವಾಗುವುದಿಲ್ಲ ಎಂಬುದನ್ನು ಇಸ್ರೇಲ್ ಇಡೀ ಜಗತ್ತಿಗೆ ಸ್ಪಷ್ಟಪಡಿಸುತ್ತದೆ. ಇಡೀ ಲೆಬನಾನ್ ಹೊತ್ತಿ ಉರಿಯಬೇಕು. ಇಸ್ರೇಲ್ ನಾಗರಿಕರನ್ನು ಮತ್ತು ಐಡಿಎಫ್‌ನ ಸೈನಿಕರನ್ನು ರಕ್ಷಿಸುವುದು ನಮ್ಮ ಅತ್ಯುನ್ನತ ಕರ್ತವ್ಯವಾಗಿದೆ. ಈ ಬಾಧ್ಯತೆಯು ಯಾವುದೇ ಇತರೆ ಆದ್ಯತೆಗಿಂತ ಮುಖ್ಯವಾಗಿದೆ'ಎಂದು ಅವರು ಬರೆಕೊಂಡಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ಅಳೆದು ತೂಗಿ ಮಾಡುವ ಕಾರ್ಯಾಚರಣೆಯಿಂದ ಗೆಲುವು ಸಿಗುವುವುದಿಲ್ಲ. ನಾವು ಹುಚ್ಚರಾಗಬೇಕು. ಶತ್ರುಗಳ ನಾಮಾವಶೇಷ ಮಾಡಬೇಕು. ಆ ಮೂಲಕ ಭಯೋತ್ಪಾದನೆಯನ್ನು ಸೋಲಿಸಬೇಕು ಎಂದು ಬರೆದಿದ್ದಾರೆ.
ಅಮೆರಿಕ-ಇರಾನ್ ಶಾಂತಿ ಒಪ್ಪಂದದ ಹೊರತಾಗಿಯೂ ದಕ್ಷಿಣ ಲೆಬನಾನ್‌ನಲ್ಲಿ ದಾಳಿ ಮುಂದುವರಿಸಿರುವ ಇಸ್ರೇಲ್, 16 ಜನರನ್ನು ಕೊಂದಿದೆ.

