HEALTH TIPS

ಅತಿಹೆಚ್ಚು ತಪ್ಪಾಗಿ ಅರ್ಥೈಸಲಾದ ಸಂಸ್ಥೆ ಆರ್‌ಎಸ್‌ಎಸ್: ಮೋಹನ್ ಭಾಗವತ್

 ತಿರುವನಂತಪುರಂ: 'ವಿಶ್ವದ ಅತಿದೊಡ್ಡ ಸ್ವಯಂಸೇವಾ ಸಂಸ್ಥೆ ಆಗಿರುವ ಹೊರತಾಗಿಯೂ, ಅತಿಹೆಚ್ಚು ತಪ್ಪಾಗಿ ಅರ್ಥೈಸಲಾದ ಸಂಸ್ಥೆ ಆರ್‌ಎಸ್‌ಎಸ್' ಎಂದು ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು. 


ಆರ್‌ಎಸ್‌ಎಸ್ ಶತಾಬ್ಧಿ ವರ್ಷದ ಅಂಗವಾಗಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 'ಹೊರಗಿನಿಂದ ನೋಡುವವರಿಗೆ ಸ್ವಯಂಸೇವಕರು ಸಮವಸ್ತ್ರದಲ್ಲಿ ನಡೆಸುವ ಪಥಸಂಚಲನವು ಅರೆಸೇನಾ ಪಡೆಯಂತೆ ಅಥವಾ ಅಖಿಲ ಭಾರತ ವ್ಯಾಯಾಮಶಾಲೆಯಂತೆ ಕಾಣಬಹುದು.

ಆದರೆ ಅದು ಸರಿಯಾದ ತಿಳಿವಳಿಕೆ ಅಲ್ಲ' ಎಂದು ಅವರು ಹೇಳಿದರು.

'ಆರ್‌ಎಸ್‌ಎಸ್ ಅನ್ನು ಹೊರಗಿನಿಂದ ಅರ್ಥ ಮಾಡಿಕೊಳ್ಳುವುದು ಕಷ್ಟ. ಸಂಘದಲ್ಲಿ ಒಬ್ಬರಾಗಿ, ಅದರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದೇ ಅದನ್ನು ಅರ್ಥಮಾಡಿಕೊಳ್ಳುವ ಉತ್ತಮ ಮಾರ್ಗ. ಆದರೆ ಸಂಘವನ್ನು ಪರೀಕ್ಷಿಸುವುದು ಮತ್ತು ಅರ್ಥ ಮಾಡಿಕೊಳ್ಳುವುದು ಸುರಕ್ಷಿತ ಎಂಬ ಭಾವವನ್ನು ಜನರಲ್ಲಿ ಮೂಡಿದಾಗ ಮಾತ್ರ ಅವರು ಸಂಘದ ಒಳ‌ಕ್ಕೆ ಬರುತ್ತಾರೆ. ಈ ನಿಟ್ಟಿನಲ್ಲಿ ಉಪನ್ಯಾಸಗಳು ಅಥವಾ ಪುಸ್ತಕಗಳು ಸಂಘದ ಬಗೆಗೆ ಕನಿಷ್ಠ ಪರಿಕಲ್ಪನೆಯನ್ನಾದರೂ ಕೊಡಬಹುದು' ಎಂದು ಅವರು ಅಭಿಪ್ರಾಯಪಟ್ಟರು.

'ದೇಶದ ಉನ್ನತಿಗಾಗಿ ಕೊಡುಗೆ ನೀಡುವ ಉದ್ದೇಶದಿಂದ ಜನ್ಮತಾಳಿದ ಸಂಘಕ್ಕೆ ನೂರು ವರ್ಷ ತುಂಬಿದ ಈ ಸಂದರ್ಭದಲ್ಲಿ, ಜನರ ಬಳಿಗೇ ಹೋಗಿ ಸಂಘದ ಬಗೆಗೆ ತಿಳಿವಳಿಕೆ ಮೂಡಿಸಲು ನಿರ್ಧರಿಸಲಾಗಿದೆ' ಎಂದು ಅವರು ತಿಳಿಸಿದರು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries