HEALTH TIPS

'ಭಾರತ್ ಭಾಗ್ಯ ವಿಧಾತ' ಚಿತ್ರದಲ್ಲಿ ದಾದಿಯರ ಸಾಹಸ ಅನಾವರಣ: ನಿತಿನ್ ಗಡ್ಕರಿ

 ನಾಗ್ಪುರ: 26/11 ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ಕಾಮಾ ಆಸ್ಪತ್ರೆಯ ದಾದಿಯರು ಹೇಗೆ ಪ್ರಾಣದ ಹಂಗು ತೊರೆದು ಜನರ ಜೀವ ಉಳಿಸಿದರು ಎಂಬುವುದನ್ನು 'ಭಾರತ್ ಭಾಗ್ಯ ವಿಧಾತ' ಸಿನಿಮಾದಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಶ್ಲಾಘಿಸಿದ್ದಾರೆ. 


ನಾಗಪುರದಲ್ಲಿ ನಡೆದ ಈ ಚಿತ್ರದ ವಿಶೇಷ ಪ್ರದರ್ಶನ ಸಮಾರಂಭದಲ್ಲಿ ಭಾಗವಹಿಸಿ ಬಳಿಕ ಮಾತನಾಡಿದ ಅವರು, ಈ ಸಿನಿಮಾ ನನ್ನ ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿತು. ಭಯೋತ್ಪಾದಕರು ದಾಳಿ ಮಾಡಿದಾಗ ನಾನು ಮುಂಬೈನಲ್ಲಿಯೇ ಇದ್ದೆ. ಉಗ್ರರು ವಿಟಿ (ಅSಒಖಿ) ರೈಲ್ವೆ ನಿಲ್ದಾಣದ ಮೇಲೆ ದಾಳಿ ಮಾಡಿದ ನಂತರ ಕಾಮಾ ಆಸ್ಪತ್ರೆಗೂ ನುಗ್ಗಿದ್ದರು. ಆ ಸಮಯದಲ್ಲಿ ಅಲ್ಲಿನ ದಾದಿಯರು ತೋರಿದ ಧೈರ್ಯ ಮತ್ತು ಜನರ ಜೀವ ಉಳಿಸಿದ ರೀತಿ ಅತ್ಯಂತ ನೈಜವಾಗಿ ಈ ಚಿತ್ರದಲ್ಲಿ ಮೂಡಿಬಂದಿದೆ ಎಂದಿದ್ದಾರೆ.

ಮನೋಜ್ ಕಪ್ಸೆ ನಿರ್ದೇಶನದ ಈ ಚಿತ್ರದಲ್ಲಿ ‌ ಬಾಲಿವುಡ್ ನಟಿ ಕಂಗನಾ ರನೌತ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಚಿತ್ರದಲ್ಲಿ ನಟಿಸಿರುವ ಬಹುತೇಕ ಕಲಾವಿದರು ಮರಾಠಿ ಮೂಲದವರಾಗಿದ್ದು, ಪ್ರತಿಯೊಬ್ಬರೂ ಅದ್ಭುತವಾಗಿ ಅಭಿನಯಿಸಿದ್ದಾರೆ ಎಂದು ಗಡ್ಕರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries