ಬದಿಯಡ್ಕ: ಜಲ ಸಂರಕ್ಷಣೆಯಲ್ಲಿ ಕಟ್ಟಗಳ ಪಾತ್ರ ಹಿರಿದು. ಕಟ್ಟಗಳ ಮಹತ್ವವನ್ನು ಮಕ್ಕಳು ತಿಳಿದುಕೊಳ್ಳುವ ಸಲುವಾಗಿ ಕುಂಬ್ಡಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯ ಏತಡ್ಕ ಇದರ ಮಕ್ಕಳ ವೇದಿಕೆಯ ಆಶ್ರಯದಲ್ಲಿ `ಕಟ್ಟದೆಡೆಗೆ ನಮ್ಮ ನಡಿಗೆ' ಕಾರ್ಯಕ್ರಮ ನಡೆಯಿತು.
ರವಿಶಂಕರ ಭಟ್ ಸಂಗಮ ನಿಲಯ ಮತ್ತು ಉದಯ ಶಂಕರ ಭಟ್ ಚೈತ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಕ್ಕಳಿಗೆ ಕಟ್ಟಗಳ ಬಗ್ಗೆ ಮಾಹಿತಿಗಳನ್ನು ನೀಡಿದರು. ಗ್ರಂಥಾಲಯದ ಅಧ್ಯಕ್ಷ ವೈ. ಕೆ. ಗಣಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆ. ಸ್ವಾಗತಿಸಿ, ಕಾರ್ಯಕಾರಿ ಸಮಿತಿ ಸದಸ್ಯ ಶಶಿಧರ ಕುದಿಂಗಿಲ ವಂದಿಸಿದರು.

.jpg)
