ಕುಂಬಳೆ: ಕುಂಬಳೆ ಪೆÇಲೀಸ್ ಠಾಣೆ ವ್ಯಾಪ್ತಿಯ ವಿವಿಧೆಡೆ ನಿಲ್ಲಿಸಿದ್ದ ಲಾರಿಗಳಿಂದ ಬ್ಯಾಟರಿ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿದ್ದ ಅಲಂಪಾಡಿ ತೈವಳಪ್ಪು ನಿವಾಸಿ ಶಮೀರ್ ಯಾನೆ ತೈವಳಪ್ಪು ಶಮೀರ್ (50)ಎಂಬಾತನನ್ನು ಮಂಗಳೂರು ಪೆÇಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಮಂಗಳೂರು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲೂ ಇದೇ ರೀತಿ ಲಾರಿಗಳಂದ ಬ್ಯಾಟರಿ ಕಳವುಗೈದ ಪ್ರಕರಣಗಳಿರುವುದರಿಂದ ಈ ಬಗ್ಗೆ ಮಾಹಿತಿ ಸಂಗ್ರಹಿಸಲು ಮಂಗಳೂರು ಪೆÇಲೀಸರು ನ್ಯಾಯಾಲಯದ ಅನುಮತಿ ಪಡೆದು ಆರೋಪಿಯನ್ನು ತಮ್ಮ ತೆಗೆದುಕೊಂಡಿದ್ದಾರೆ. ಕುಂಬಳೆ ಪೆÇಲೀಸ್ ಠಾಣೆ ವ್ಯಾಪ್ತಿಯ ವಿವಿಧೆಡೆಗಳಲ್ಲಿ ನಿಲ್ಲಿಸಿದ್ದ 9 ಲಾರಿಗಳಿಂದ ಬ್ಯಾಟರಿ ಕಳವು ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಶಮೀರ್‍ನನ್ನು ಪೆÇಲೀಸರು ಇತ್ತೀಚೆಗೆ ಬಂಧಿಸಿದ್ದರು. ಬಳಿಕ ಈತನಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿತ್ತು. ಅನಂತರ ಆರೋಪಿಯನ್ನು ಕಸ್ಟಡಿಗೆ ತೆಗೆದ ಪೆÇಲೀಸರು ನಡೆಸಿದ ತನಿಖೆಯಲ್ಲಿ ಆರೋಪಿ ಕಳವುಗೈದು ಮಾರಾಟ ಮಾಡಿದ ಬ್ಯಾಟರಿಗಳ ಪೈಕಿ ಒಂದನ್ನು ಕಾಸರಗೋಡಿನ ಗುಜರಿ ಅಂಗಡಿಯೊಂದಿಂದ ವಶಪಡಿಸಲಾಗಿತ್ತು. ಬ್ಯಾಟರಿ ಕಳವು ಪ್ರಕರಣದಲ್ಲಿ ಇನ್ನೂ ಮೂವರು ಸೆರಗೀಡಾಗಲು ಬಾಕಿಯಿದ್ದಾರೆ. ಚೆರ್ಕಳ ನಿವಾಸಿ ಮಜೀದ್, ಫವಾಸ್ ಹಾಗೂ ಫಾರೂಕ್ ಎಂಬುವರಿಗಾಗಿ ಹುಡುಕಾಟ ನಡೆಯುತ್ತಿರುವುದಾಗಿ ಕುಂಬಳೆ ಪೆÇಲೀಸರು ತಿಳಿಸಿದ್ದಾರೆ.


