HEALTH TIPS

ಮಧ್ಯಪ್ರದೇಶ | NEET ಗೆ ಇನ್ನೊಂದು ಬಲಿ?

ಇಂದೋರ್: NEET ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ 21 ವರ್ಷದ ಯುವತಿಯೊಬ್ಬಳು ಗುರುವಾರ ರಾತ್ರಿ ಇಲ್ಲಿಯ ಕಟ್ಟಡವೊಂದರ ಮೇಲಿನಿಂದ ಅನುಮಾನಾಸ್ಪದ ರೀತಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮೃತ NEET ಆಕಾಂಕ್ಷಿ ಅವಂತಿಕಾ ಮೌರ್ಯ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸಲು ನಗರದಲ್ಲಿರುವ ತನ್ನ ಅಕ್ಕನ ಮನೆಯಲ್ಲಿ ವಾಸವಿದ್ದಳು.

ಕುಟುಂಬ ಸದಸ್ಯರ ಪ್ರಕಾರ, ರಾತ್ರಿ 11:30ರ ಸುಮಾರಿಗೆ ಈ ಘಟನೆ ನಡೆದಿದೆ. ನಾಲ್ಕು ಅಂತಸ್ತಿನ ಮನೆಯ ಬಾಲ್ಕನಿಯಲ್ಲಿ ನಿಂತು ಮೊಬೈಲ್‌ ನಲ್ಲಿ ಮಾತನಾಡುತ್ತಿದ್ದ ಅವಂತಿಕಾ ಬಳಿಕ ಕಟ್ಟಡದ ಮೇಲಿನ ಮಹಡಿಗೆ ತೆರಳಿದ್ದಳು ಎನ್ನಲಾಗಿದೆ. ಸ್ವಲ್ಪ ಸಮಯದ ನಂತರ ಕುಟುಂಬ ಸದಸ್ಯರಿಗೆ ಭಾರೀ ಶಬ್ದ ಕೇಳಿಸಿದ್ದು, ಆಕೆ ಮೇಲಿನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿರುವುದು ಕಂಡುಬಂದಿದೆ.

ಅವಂತಿಕಾಳನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಹಾರಾಜ ಯಶವಂತರಾವ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ನಸುಕಿನ ವೇಳೆ ಕೊನೆಯುಸಿರೆಳೆದಿದ್ದಾಳೆ.

ಅವಂತಿಕಾ ಮೂಲತಃ ಧಾರ್ ಜಿಲ್ಲೆಯವಳಾಗಿದ್ದು, NEET ಪರೀಕ್ಷೆಯ ತಯಾರಿಗಾಗಿ ವೈದ್ಯೆಯಾಗಿರುವ ತನ್ನ ಅಕ್ಕನೊಂದಿಗೆ ಇಂದೋರಿನಲ್ಲಿ ಉಳಿದುಕೊಂಡಿದ್ದಳು. ವೈದ್ಯಕೀಯ ಕ್ಷೇತ್ರದೊಂದಿಗೆ ಗುರುತಿಸಿಕೊಂಡಿರುವ ಆಕೆಯ ತಂದೆ ಇಂದೋರಿನಲ್ಲಿ ತರಬೇತಿ ಪಡೆಯುತ್ತಿದ್ದು, ಘಟನೆ ನಡೆದಾಗ ಫ್ಲ್ಯಾಟ್‌ ನಲ್ಲಿಯೇ ಇದ್ದರು.

ಅವಂತಿಕಾ ಈ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು ಎಂದು ಆಕೆಯ ಸಹೋದರ ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ. ಇಂದೋರ್ ಬಳಿಯ ಪ್ರಸಿದ್ಧ ಪ್ರವಾಸಿ ತಾಣವಾದ ಟಿಂಚಾ ಫಾಲ್ಸ್‌ಗೆ ಭೇಟಿ ನೀಡುವ ಬಯಕೆಯನ್ನು ಆಕೆ ಇತ್ತೀಚೆಗೆ ವ್ಯಕ್ತಪಡಿಸಿದ್ದಳು. ಆದರೆ ಅದಕ್ಕೆ ಅವಕಾಶ ನೀಡಿರಲಿಲ್ಲ ಎಂದೂ ಆತ ಹೇಳಿದ್ದಾನೆ.

ಕುಟುಂಬದವರ ಪ್ರಕಾರ, ಘಟನೆ ನಡೆಯುವ ಸ್ವಲ್ಪ ಮೊದಲು ಅವಂತಿಕಾ ತನ್ನ ಅಕ್ಕನೊಂದಿಗೆ ವಿಡಿಯೊ ಕಾಲ್‌ ನಲ್ಲಿ ಮಾತನಾಡಿದ್ದಳು.

ಅವಂತಿಕಾ ಕಟ್ಟಡದಿಂದ ಜಿಗಿದಿದ್ದಾಳೆ ಎಂದು ಆಕೆಯ ಸಹೋದರ, ಸೋದರ ಸಂಬಂಧಿ ಮತ್ತು ತಂದೆ ಪೊಲೀಸರಿಗೆ ತಿಳಿಸಿದ್ದಾರೆ. ಆದರೂ, ಎಲ್ಲ ಕೋನಗಳಿಂದಲೂ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಗೆ ಕಾರಣವಾದ ಸಂದರ್ಭಗಳನ್ನು ನಿರ್ಧರಿಸಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳು, ಫೋನ್ ದಾಖಲೆಗಳು ಮತ್ತು ಇತರ ಪುರಾವೆಗಳನ್ನು ಪರಿಶೀಲಿಸುತ್ತಿದ್ದಾರೆ.

ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries