HEALTH TIPS

ಇಂಡಿಯಾ ಮೈತ್ರಿಕೂಟದಲ್ಲಿ ಯಾವುದೇ ಒಡಕಿಲ್ಲ; TVK ʼಪರ್ಯಾಯ ಮಿತ್ರ ಪಕ್ಷʼ: ಶಿವಸೇನೆಯ ಸಂಜಯ್ ರಾವತ್ ಹೇಳಿಕೆ

 ನವದೆಹಲಿ: ಇಂಡಿಯಾ ಮೈತ್ರಿಕೂಟದಲ್ಲಿ ಬಿಕ್ಕಟ್ಟಿದೆ ಎಂಬ ವದಂತಿಗಳನ್ನು ಶುಕ್ರವಾರ ಅಲ್ಲಗಳೆದಿರುವ ಶಿವಸೇನೆ (ಉದ್ಧವ್ ಠಾಕ್ರೆ ಬಣ) ನಾಯಕ ಸಂಜಯ್ ರಾವತ್ "ಇಂಡಿಯಾ ಮೈತ್ರಿಕೂಟದಲ್ಲಿ ಯಾವುದೇ ಒಡಕಿಲ್ಲ. ತಮಿಳಗ ವೆಟ್ರಿ ಕಳಗಂ ಪಕ್ಷ (ಖಿಗಿಏ) ಇಂಡಿಯಾ ಮೈತ್ರಿಕೂಟದ ರ‍್ಯಾಯ ಮಿತ್ರ ಪಕ್ಷ" ಎಂದು ಸ್ಪಷ್ಟಪಡಿಸಿದ್ದಾರೆ.


ಜೂನ್ ೮ರಂದು ಹೊಸದಿಲ್ಲಿಯಲ್ಲಿ ಆಯೋಜನೆಗೊಂಡಿರುವ ಇಂಡಿಯಾ ಮೈತ್ರಿಕೂಟ ಸಭೆಗೆ ಗೈರಾಗುವುದಾಗಿ ಡಿಎಂಕೆ ಘೋಷಿಸಿದ ಬೆನ್ನಿಗೇ ಅವರಿಂದ ಈ ಹೇಳಿಕೆ ಹೊರ ಬಿದ್ದಿದೆ. ಕಳೆದ ತಿಂಗಳು ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದ ಬಳಿಕ ಟಿವಿಕೆ ಸರಕಾರಕ್ಕೆ ಬೆಂಬಲಿಸುವ ಕಾಂಗ್ರೆಸ್ ನರ‍್ಧಾರ ತನ್ನ ಈ ನರ‍್ಧಾರಕ್ಕೆ ಕಾರಣ ಎಂದು ಡಿಎಂಕೆ ಹೇಳಿದೆ.

ಡಿಎಂಕೆ ನೇತೃತ್ವದ ಮೈತ್ರಿಕೂಟದ ಭಾಗವಾಗಿ ವಿಧಾನಸಭಾ ಚುನಾವಣೆಯಲ್ಲೂ ಸ್ರ‍್ಧಿಸಿದ ಬಳಿಕವೂ, ಟಿವಿಕೆಗೆ ಬೆಂಬಲವನ್ನು ನೀಡುವ ಮೂಲಕ ಕಾಂಗ್ರೆಸ್ ತನ್ನ ಮಿತ್ರಪಕ್ಷದ ಬೆನ್ನಿಗೆ ಇರಿದಿದೆ ಮತ್ತು ದ್ರೋಹವೆಸಗಿದೆ ಎಂದು ಡಿಎಂಕೆ ಆರೋಪಿಸಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ರಾವತ್, "ಟಿವಿಕೆ ಕೋಟಾ ಮೂಲಕ ಎಐಎಡಿಎಂಕೆ ತೆರವುಗೊಳಿಸಿರುವ ರಾಜ್ಯಸಭಾ ಸ್ಥಾನವನ್ನು ಕಾಂಗ್ರೆಸ್ ಪಡೆದಿದೆ" ಎಂದು ತಿಳಿಸಿದ್ದಾರೆ.

"ಇಂಡಿಯಾ ಮೈತ್ರಿಕೂಟದಲ್ಲಿ ಒಡಕಿದೆ ಎಂಬುದು ತಪ್ಪು. ತಮಿಳುನಾಡು ವಿಧಾನಸಭಾ ಚುನಾವಣೆಯ ಬಳಿಕ ಡಿಎಂಕೆಯೇ ಮೈತ್ರಿಕೂಟದಿಂದ ಅಂತರ ಕಾಯ್ದುಕೊಳ್ಳಲು ಪ್ರಾರಂಭಿಸಿತು. ಅದರ ಬದಲಾಗಿ ನಾವು ಟಿವಿಕೆಯನ್ನು ಪಡೆದಿದ್ದೇವೆ. ಇದನ್ನು ಒಡಕು ಎಂದು ಕರೆಯಬೇಡಿ. ಆದರೆ, ಇಂಡಿಯಾ ಮೈತ್ರಿಕೂಟ ರ‍್ಯಾಯ ಸ್ನೇಹಿತನನ್ನು ಪಡೆದಿದೆ" ಎಂದು ರಾಜ್ಯಸಭಾ ಸದಸ್ಯರೂ ಆದ ಸಂಜಯ್ ರಾವತ್ ಸ್ಪಷ್ಟನೆ ನೀಡಿದ್ದಾರೆ.

 ನಡುವೆ, ಜೂನ್ ೮ರಂದು ನಡೆಯಲಿರುವ ಇಂಡಿಯಾ ಮೈತ್ರಿಕೂಟದ ಸಭೆಗೆ ಪಕ್ಷದ ವತಿಯಿಂದ ಯಾರು ಭಾಗವಹಿಸಲಿದ್ದಾರೆ ಎಂಬುದನ್ನು ಶಿವಸೇನೆ (ಉದ್ಧವ್ ಬಣ)ಯ ಮುಖ್ಯಸ್ಥ ಉದ್ಧವ್ ಠಾಕ್ರೆ ನರ‍್ಧರಿಸಲಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries