ಅಲಹಾಬಾದ್ :ಸಾಮಾಜಿಕ ಮಾಧ್ಯಮ ಫ್ಲಾಟ್‌ಫಾರ್ಮ್ 'ಎಕ್ಸ್'ನಲ್ಲಿ ದ್ವೇಷ ಪ್ರಚೋದಿಸುವ ಮತ್ತು ಮೊರದಾಬಾದ್ ಮಹಾನಗರ ಪಾಲಿಕೆಯನ್ನು ನಿಂದಿಸುವ ವೀಡಿಯೊವನ್ನು ಮರು ಹಂಚಿಕೊಂಡ ಆರೋಪದಲ್ಲಿ ನ್ಯೂಸ್ 24ರ ಪತ್ರಕರ್ತ ಶಹನವಾಜ್ ಅವರ ಬಂಧನಕ್ಕೆ ಅಲಹಬಾದ್ ಉಚ್ಚ ನ್ಯಾಯಾಲಯ ತಡೆ ನೀಡಿದೆ.
ಮುಂದಿನ ವಿಚಾರಣೆಯ ದಿನಾಂಕವಾದ ಜುಲೈ 10ರ ವರೆಗೆ ಅವರ ವಿರುದ್ಧ ಯಾವುದೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳದಂತೆ ಪೀಠ ಮಂಗಳವಾರ ಆದೇಶಿಸಿದೆ. ಆದರೆ, ಶಹನವಾಝ್ ಅವರು ತನಿಖಾಧಿಕಾರಿಗೆ ಸಹಕರಿಸಬೇಕು ಎಂದು ಪೀಠ ನಿಬಂಧನೆ ವಿಧಿಸಿದೆ.
ಶಾಂತಿ ಭಂಗ ಉಂಟು ಮಾಡುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಅವಮಾನಿಸಿದ ಆರೋಪದಲ್ಲಿ ಅವರ ವಿರುದ್ಧ ಫೆಬ್ರವರಿ 17ರಂದು ಮೊರದಾಬಾದ್ ಜಿಲ್ಲೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನ್ನ ವಿರುದ್ಧ ದಾಖಲಾದ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಶಹನವಾಜ್ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

