HEALTH TIPS

ಮಣಿಪುರದಲ್ಲಿ ಮತ್ತೆ ಹಿಂಸಾಚಾರ : ಮೂವರು ನಾಗರಿಕರ ಹತ್ಯೆ; 7 ಮನೆಗಳಿಗೆ ಬೆಂಕಿ

 ಇಂಫಾಲ: ಮಣಿಪುರದ ಕಾಂಗ್ಪೋಕ್ಪಿ ಜಿಲ್ಲೆಯ ಲೋಯಿಬೋಲ್ ಖುಲ್ಲೆನ್ ಗ್ರಾಮದಲ್ಲಿ ಶುಕ್ರವಾರ ನಸುಕಿನಲ್ಲಿ ನಡೆದ ಶಂಕಿತ ಬಂಡುಕೋರರ ದಾಳಿಯಲ್ಲಿ ಮೂವರು ಮೃತಪಟ್ಟು, ಏಳು ಮನೆಗಳು ಬೆಂಕಿಗಾಹುತಿಯಾಗಿದೆ ಎಂದು ಕುಕಿ ಇನ್ಪಿ ಮಣಿಪುರ ಸಂಘಟನೆ(KIM) ತಿಳಿಸಿದೆ.


ಮೃತರನ್ನು ಲೋಯಿಬೋಲ್ ಖುಲ್ಲೆನ್ ಗ್ರಾಮದ ಲೆಟ್ಖೋಂಗಾಮ್ ಹಾವೋಕಿಪ್, ಅವರ ಪತ್ನಿ ತಿನ್ಮರಿ ಹಾವೊಕಿಪ್ ಹಾಗೂ ಜಂಗ್ನಿನಾಲ್ ಹಾವೊಕಿಪ್ ಎಂದು ಗುರುತಿಸಲಾಗಿದೆ.

ಈ ಸಂಬಂಧ ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಿರುವ ಏIಒ ಸಂಘಟನೆ, ಓSಅಓ-Iಒ ಮತ್ತು ಅದರ ಅಧೀನ ಸಂಘಟನೆಯಾದ ZUಈ (ಏ)ಯ ಶಸ್ತ್ರಸಜ್ಜಿತ ಸದಸ್ಯರು ಮುಂಜಾನೆ ನಾಲ್ಕು ಗಂಟೆಗೆ ಗ್ರಾಮದ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಮೂವರು ನಾಗರಿಕರು ಮೃತಪಟ್ಟಿದ್ದು, ಏಳು ಮನೆಗಳನ್ನು ನಾಶಗೊಳಿಸಲಾಗಿದೆ. ಸಾರ್ವಜನಿಕ ಸ್ವತ್ತುಗಳಿಗೆ ಭಾರಿ ಪ್ರಮಾಣದ ಹಾನಿಯನ್ನುಂಟು ಮಾಡಲಾಗಿದೆ ಎಂದು ತಿಳಿಸಿದೆ.

ಘಟನೆಯ ಕುರಿತು ಪೊಲೀಸರು ಈವರೆಗೆ ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries