HEALTH TIPS

ಮುಕ್ತ ವ್ಯಾಪಾರ ಒಪ್ಪಂದ: ಬ್ರಿಟನ್‌ಗೆ ಸುಂಕ ರಹಿತವಾಗಿ 11 ಲಕ್ಷ ಟನ್ ಉಕ್ಕು ರಫ್ತು

 ನವದೆಹಲಿ: ಭಾರತ ಮಾಡಿಕೊಂಡಿರುವ ಮುಕ್ತ ವ್ಯಾಪಾರ ಒಪ್ಪಂದದ ಅನ್ವಯ ದೇಶದ ರಫ್ತುದಾರರು ವಾರ್ಷಿಕವಾಗಿ 11 ಲಕ್ಷ ಟನ್ ಉಕ್ಕನ್ನು ಸುಂಕ ರಹಿತವಾಗಿ ಬ್ರಿಟನ್‌ಗೆ ರಫ್ತು ಮಾಡಬಹುದಾಗಿದೆ. ಈ ಒಪ್ಪಂದವು ಜುಲೈ 15ರಿಂದ ಜಾರಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 


2025 ಜುಲೈ 24 ರಂದು ಸಹಿ ಹಾಕಲಾದ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದವನ್ನು ಜಾರಿಗೆ ತರುವಲ್ಲಿ ಬ್ರಿಟನ್ ಮಾರ್ಚ್‌ ತಿಂಗಳಲ್ಲಿ ಜಾರಿ ಮಾಡಿದ್ದ ಉಕ್ಕು ರಕ್ಷಣಾ ಕ್ರಮಗಳು ಪ್ರಮುಖ ಅಡಚಣೆಯಾಗಿ ಪರಿಣಮಿಸಿದ್ದವು. ಬಳಿಕ, ಈ ಕುರಿತಂತೆ ಮಾತುಕತೆ ನಡೆದು ನಿರ್ಣಯಕ್ಕೆ ಬಂದ ಬಳಿಕ ಜುಲೈ 15 ರಿಂದ ಒಪ್ಪಂದ ಜಾರಿಗೆ ನಿರ್ಧರಿಸಲಾಗಿತ್ತು.

ಭಾರತದಿಂದ ರಫ್ತಾಗುವ 137 ಮಿಲಿಯನ್ ಡಾಲರ್ ಮೌಲ್ಯದ 188 ಉಕ್ಕಿನ ಉತ್ಪನ್ನಗಳು ಬ್ರಿಟನ್‌ನ ಉಕ್ಕು ರಕ್ಷಣಾ ಕ್ರಮಗಳ ಅಡಿ ಬರುತ್ತವೆ. 2025ರಲ್ಲಿ ಭಾರತದ ಉಕ್ಕಿನ ರಫ್ತು ಮೌಲ್ಯ 960 ಮಿಲಿಯನ್ ಡಾಲರ್‌ನಷ್ಟಿತ್ತು.

ಭಾರತದ ಉಕ್ಕು ರಫ್ತುದಾರರ ಹಿತಾಸಕ್ತಿ ರಕ್ಷಿಸುವ ದೃಷ್ಟಿಯಿಂದ ಭಾರತವು ಬ್ರಿಟನ್‌ನ ಉಕ್ಕು ರಕ್ಷಣಾ ಕ್ರಮಗಳಲ್ಲಿ ವಿನಾಯಿತಿಗಾಗಿ ಸುದೀರ್ಘ ಚರ್ಚೆಯಲ್ಲಿ ತೊಡಗಿಸಿಕೊಂಡಿತ್ತು. ಭಾರತ ಮತ್ತು ಬ್ರಿಟನ್‌ನ ಎರಡೂ ತಂಡಗಳು ಎಲ್ಲ ಹಂತಗಳಲ್ಲಿ ನಡೆಸಿದ ಸುದೀರ್ಘ ಮತ್ತು ಸಮಗ್ರ ಚರ್ಚೆಯ ಬಳಿಕ ಭಾರತವು ಬಲಿಷ್ಠ ಮಾರುಕಟ್ಟೆ ಪ್ರವೇಶ ಮತ್ತು ನಿರಂತರತೆಗೆ ಅನುಕೂಲವಾಗಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. 







.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries