HEALTH TIPS

ಇತಿಹಾಸ ಸೃಷ್ಟಿಸಿದ ವಿಕ್ರಮ್-1: ದೇಶದ ಮೊದಲ ಖಾಸಗಿ ಕಕ್ಷೀಯ ರಾಕೆಟ್ ಉಡ್ಡಯನ

 ಹೈದರಾಬಾದ್‌: ದೇಶದ ಬಾಹ್ಯಾಕಾಶ ಕ್ಷೇತ್ರವು ಹೊಸದೊಂದು ಮೈಲುಗಲ್ಲಿಗೆ ಸಾಕ್ಷಿಯಾಗಿದೆ. ಹೈದರಾಬಾದ್‌ನ ಸ್ಪೇಸ್‌-ಟೆಕ್‌ ಸಾರ್ಟ್‌ಆಪ್‌ 'ಸ್ಕೈರೂಟ್‌ ಏರೊಸ್ಪೇಸ್‌' ನಿರ್ಮಿಸಿದ 'ವಿಕ್ರಮ್-1' ರಾಕೆಟ್‌ ಅನ್ನು ಶನಿವಾರ ಯಶಸ್ವಿಯಾಗಿ ಉಡ್ಡಯನ ಮಾಡಲಾಗಿದೆ.


ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮಧ್ಯಾಹ್ನ 12.05ಕ್ಕೆ ರಾಕೆಟ್ ನಭಕ್ಕೆ ಚಿಮ್ಮಿತು. ಖಾಸಗಿಯಾಗಿ ಅಭಿವೃದ್ಧಿಪಡಿಸಿದ ಭಾರತದ ಮೊದಲ ಕಕ್ಷೀಯ ರಾಕೆಟ್‌ ಇದಾಗಿದೆ.

ಈ ರಾಕೆಟ್ ತಂತ್ರಜ್ಞಾನ ಪ್ರಾತ್ಯಕ್ಷಿಕೆಯ ಹತ್ತಾರು ಪೇಲೋಡ್‌ಗಳನ್ನು (ಉಪಗ್ರಹ ಸಾಧನಗಳನ್ನು) ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಪೋಸ್ಟ್‌ಕಾರ್ಡ್ ಅನ್ನು ಹೊತ್ತೊಯ್ದಿದೆ.

ವಿಕ್ರಮ್‌-1 ಬಹುಹಂತದ ಉಡಾವಣಾ ವಾಹನವಾಗಿದ್ದು, 350 ಕೆ.ಜಿ. ತೂಕದ ಸಣ್ಣ ಉಪಗ್ರಹಗಳನ್ನು ಭೂಮಿಯ ಕೆಳಹಂತದ ಕಕ್ಷೆಗೆ ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.

ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ಎಂದೇ ಕರೆಯಲ್ಪಡುವ 'ವಿಕ್ರಮ್ ಸಾರಾಭಾಯ್' ಅವರ ಹೆಸರನ್ನು ಈ ರಾಕೆಟ್‌ಗೆ (ವಿಕ್ರಮ್-1) ಇಡಲಾಗಿದೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries