HEALTH TIPS

ಭಾರತದ ಮೊದಲ ಖಾಸಗಿ ರಾಕೆಟ್ ಉಡ್ಡಯನ: ಸ್ಕೈರೂಟ್ ಏರೊಸ್ಪೇಸ್‌ಗೆ ಮೋದಿ ಅಭಿನಂದನೆ

 ನವದೆಹಲಿ: ಖಾಸಗಿಯಾಗಿ ಅಭಿವೃದ್ಧಿಪಡಿಸಿರುವ ದೇಶದ ಮೊದಲ ಕಕ್ಷೀಯ ರಾಕೆಟ್ ವಿಕ್ರಮ್-1 ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಅದನ್ನು ತಯಾರಿಸಿದ ಸ್ಕೈರೂಟ್ ಏರೊಸ್ಪೇಸ್ ಸಂಸ್ಥೆಯ ತಂಡದ ಜೊತೆ ಮಾತನಾಡಿ ಅಭಿನಂದನೆ ಸಲ್ಲಿಸಿದ್ದಾರೆ.


ಭಾರತದ ಹೆಚ್ಚುತ್ತಿರುವ ಖಾಸಗಿ ವಲಯದ ಭಾಗವಹಿಸುವಿಕೆಯು ಹೊಸ ಅವಕಾಶಗಳನ್ನು ತೆರೆಯುತ್ತಿದ್ದು, ನಾವೀನ್ಯತೆಯನ್ನು ವೇಗಗೊಳಿಸುತ್ತಿದೆ ಎಂದು ಮೋದಿ ಹೇಳಿದ್ದಾರೆ.

'ಸ್ಕೈರೂಟ್ ಏರೋಸ್ಪೇಸ್ ತಂಡದೊಂದಿಗೆ ಮಾತನಾಡಿ ವಿಕ್ರಮ್ -1ರ ಯಶಸ್ವಿ ಉಡ್ಡಯನಕ್ಕೆ ಅವರನ್ನು ಅಭಿನಂದಿಸಿದೆ. ಇದು ಭಾರತದ ಬಾಹ್ಯಾಕಾಶ ಪ್ರಯಾಣದಲ್ಲಿ ನಿರ್ಣಾಯಕ ಕ್ಷಣವಾಗಿದೆ' ಎಂದು ಮೋದಿ ಎಕ್ಸ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

'ಈ ಸಾಧನೆಯು ಅಸಂಖ್ಯಾತ ಯುವಕರು ದೊಡ್ಡ ಕನಸು ಕಾಣಲು ಮತ್ತು ನಿರ್ಭಯವಾಗಿ ಹೊಸತನವನ್ನು ಅಂಗೀಕರಿಸಲು ಪ್ರೋತ್ಸಾಹಿಸುತ್ತದೆ'ಎಂದು ಅವರು ಹೇಳಿದ್ದಾರೆ.

ಶನಿವಾರ ಉಡಾವಣೆಯಾದ ಖಾಸಗಿಯಾಗಿ ಅಭಿವೃದ್ಧಿಪಡಿಸಿದ ಭಾರತದ ಮೊದಲ ಕಕ್ಷೀಯ ರಾಕೆಟ್ ವಿಕ್ರಮ್ -1ಬಹು ತಂತ್ರಜ್ಞಾನದ ಪೇಲೋಡ್‌ಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.

'ಮಿಷನ್ ಆಗಮನ್' ಎಂದು ಹೆಸರಿಸಲಾದ ಈ ಕಾರ್ಯಾಚರಣೆಯು, ಸ್ಕೈರೂಟ್ ಏರೋಸ್ಪೇಸ್‌ನ ನೇತೃತ್ವದಲ್ಲಿ ಭಾರತದ ಖಾಸಗಿ ಬಾಹ್ಯಾಕಾಶ ವಲಯವು ಕಕ್ಷೆಗೆ ಉಪಗ್ರಹ ಉಡಾವಣೆ ಮಾಡುವ ಮಾರುಕಟ್ಟೆ ಪ್ರವೇಶವನ್ನು ಸೂಚಿಸುತ್ತದೆ. ಈ ಕಾರ್ಯಾಚರಣೆಯು ಅತ್ಯಂತ ಯಶಸ್ವಿಯಾಗಿದೆ'ಎಂದು ಕಂಪನಿ ತಿಳಿಸಿದೆ.

ಇದಕ್ಕೂ ಮುನ್ನ,ಈ ಉಪಕ್ರಮವನ್ನು ಭಾರತದ ಬಾಹ್ಯಾಕಾಶ ಪಯಣದಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲು ಎಂದು ಮೋದಿ ಬಣ್ಣಿಸಿದ್ದರು. ತ್ವರಿತ ಮತ್ತು ಬೇಡಿಕೆಗೆ ಅನುಗುಣವಾದ ಉಡ್ಡಯನ ಸೇವೆಗಳನ್ನು ಒದಗಿಸಲು ಈ ನಾಲ್ಕು ಹಂತದ ರಾಕೆಟ್ ಅನ್ನು ವಿನ್ಯಾಸಗೊಳಿಸಲಾಗಿದೆ ಎಂದು ಅವರು ಹೇಳಿದರು.

ಈ ಕಾರ್ಯಾಚರಣೆಯು ಭಾರತದ ಯುವಜನತೆಯ ಪ್ರತಿಭೆ, ದೃಢನಿಶ್ಚಯ ಮತ್ತು ಉದ್ಯಮಶೀಲತೆಯ ಮನೋಭಾವವನ್ನು ಎತ್ತಿ ತೋರಿಸುತ್ತದೆ. ಬಾಹ್ಯಾಕಾಶ ವಲಯದ ಸುಧಾರಣೆಗಳು ನಾವೀನ್ಯತೆ ಮತ್ತು ಉದ್ಯಮಶೀಲತೆಗೆ ಹೇಗೆ ಹೊಸ ಅವಕಾಶಗಳನ್ನು ತೆರೆಯುತ್ತಿವೆ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಹೇಳಿದ್ದಾರೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries