HEALTH TIPS

ನ್ಯಾಯಾಲಯ 24×7 ಮನರಂಜನಾ ವಾಹಿನಿಯಲ್ಲ: ಕಲಾಪಗಳ ವಿಡಿಯೊ ಹಂಚಿಕೆಗೆ ಸುಪ್ರೀಂ ತಡೆ

ನವದೆಹಲಿ: 'ನ್ಯಾಯಾಲಯವು 2್ಠ47 ಮನರಂಜನಾ ವಾಹಿನಿಯಾಗಲು ಸಾಧ್ಯವಿಲ್ಲ. ಡಿಜಿಟಲ್ ಮಾಹಿತಿಯ ನಿಯಂತ್ರಣ ಇಂದಿನ ದೊಡ್ಡ ಸವಾಲಾಗಿದೆ' ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್, ನ್ಯಾಯಾಲಯದ ಕಲಾಪಗಳ ಆಡಿಯೊ-ವಿಡಿಯೊ ದಾಖಲಾತಿಗಳನ್ನು ಪೂರ್ವಾನುಮತಿ ಇಲ್ಲದೆ ಸಾಮಾಜಿಕ ಜಾಲತಾಣಗಳು ಹಾಗೂ ಇತರ ಡಿಜಿಟಲ್ ವೇದಿಕೆಗಳಲ್ಲಿ ಪೋಸ್ಟ್ ಮಾಡುವುದು, ಮರುಹಂಚಿಕೆ ಅಥವಾ ವಾಣಿಜ್ಯ ಉದ್ದೇಶಕ್ಕೆ ಬಳಸಕೂಡದು ಎಂದು ಮಧ್ಯಂತರ ಆದೇಶ ನೀಡಿದೆ. 


ನ್ಯಾಯಾಂಗ ಕಲಾಪಗಳ ಆಡಿಯೊ-ವಿಡಿಯೊ ದಾಖಲಾತಿಗಳ ದುರುಪಯೋಗ ತಡೆಯುವಂತೆ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು ಈ ಆದೇಶ ನೀಡಿದೆ.

ಸುಪ್ರೀಂ ಕೋರ್ಟ್‌ನ ಕಾರ್ಯದರ್ಶಿ ಜನರಲ್ ಅಥವಾ ಸಂಬಂಧಿತ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರ ಪೂರ್ವಾನುಮತಿ ಪಡೆಯದೆ ನ್ಯಾಯಾಲಯದ ಕಲಾಪಗಳ ಆಡಿಯೊ-ವಿಡಿಯೊವನ್ನು ಸಂಪಾದಿಸುವುದು, ಪ್ರಸಾರ ಮಾಡುವುದು, ಹಣ ಗಳಿಕೆಗಾಗಿ ಬಳಸುವುದು, ಪೋಸ್ಟ್ ಮಾಡುವುದು, ಮರುಪೋಸ್ಟ್ ಮಾಡುವುದು ಹಾಗೂ ಅಪ್‌ಲೋಡ್ ಮಾಡುವುದು ಸಲ್ಲ ಎಂದು ಎಂದು ಪೀಠ ನಿರ್ದೇಶಿಸಿದೆ.

ಆದರೆ, ನ್ಯಾಯಾಲಯದ ಕಲಾಪಗಳ ಕುರಿತು ಮಾಧ್ಯಮಗಳು ಪ್ರಕಟಿಸುವ ಸುದ್ದಿಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ಸಂಬಂಧ ಪತ್ರಕರ್ತೆ ಹರ್ಷಿತಾ ಗ್ರೋವರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಸರ್ಕಾರ ಹಾಗೂ ಕೆಲವು ಸಾಮಾಜಿಕ ಜಾಲತಾಣಗಳು ಸೇರಿದಂತೆ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿತು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ವಿಕಾಸ್ ಸಿಂಗ್, ನ್ಯಾಯಾಲಯದ ಕಲಾಪಗಳ ಆಯ್ದ ಭಾಗಗಳನ್ನು ಮಾತ್ರ ಕತ್ತರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗುತ್ತಿದ್ದು, ಅವುಗಳನ್ನು ತಪ್ಪುದಾರಿಗೆಳೆಯುವ ರೀತಿಯಲ್ಲಿ ಬಳಸಲಾಗುತ್ತಿದೆ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ನ್ಯಾಯಾಂಗದ ಘನತೆ ಮತ್ತು ವಿಶ್ವಾಸವನ್ನು ಕಾಪಾಡುವುದು ಅಗತ್ಯವಾಗಿದ್ದು, ಡಿಜಿಟಲ್ ಮಾಹಿತಿಯ ನಿಯಂತ್ರಣ ಈಗಿನ ದೊಡ್ಡ ಸವಾಲಾಗಿದೆ ಎಂದು ಅಭಿಪ್ರಾಯಪಟ್ಟಿತು.

ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ನ್ಯಾಯಾಲಯದ ವಿಡಿಯೊಗಳನ್ನು ಆಯ್ದ ಭಾಗಗಳಾಗಿ ಹರಡಿ ನಿರ್ದಿಷ್ಟ ಕಥನ ಸೃಷ್ಟಿಸಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕೃತಕ ಬುದ್ಧಿಮತ್ತೆ ಸೇರಿದಂತೆ ತಂತ್ರಜ್ಞಾನ ಬಳಸಿ ನ್ಯಾಯಮೂರ್ತಿಗಳು ಅಥವಾ ವಕೀಲರು ಹೇಳದ ಮಾತುಗಳನ್ನೂ ವಿಡಿಯೊಗಳಲ್ಲಿ ಸೇರಿಸುವ ಅಪಾಯವಿದೆ ಎಂದರು.

ತಮ್ಮ ಹೇಳಿಕೆಗಳನ್ನೂ ಇತ್ತೀಚೆಗೆ ತಪ್ಪಾಗಿ ವರದಿ ಮಾಡಲಾಗಿದೆ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ಮಾಧ್ಯಮಗಳಲ್ಲಿ ವಾಸ್ತವಕ್ಕೆ ವಿರುದ್ಧವಾದ ವರದಿಗಳು ಪ್ರಕಟವಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ನ್ಯಾಯಾಲಯದ ಕಲಾಪಗಳ ನೇರಪ್ರಸಾರವನ್ನು ಪಾರದರ್ಶಕತೆ ಮತ್ತು ಸಾರ್ವಜನಿರಿಗೆ ಲಭ್ಯವಾಗಲು ಆರಂಭಿಸಲಾಗಿದ್ದರೂ, ಅವುಗಳ ಮರುಪ್ರಸಾರ ಮತ್ತು ವಾಣಿಜ್ಯ ಬಳಕೆಗೆ ಸ್ಪಷ್ಟ ನಿಯಮಗಳಿಲ್ಲದಿರುವುದು ದುರುಪಯೋಗಕ್ಕೆ ಕಾರಣವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಆಯ್ದ ವಿಡಿಯೊ ತುಣುಕುಗಳನ್ನು ಸಂಚಲನಕಾರಿ ಶೀರ್ಷಿಕೆಗಳೊಂದಿಗೆ ಪ್ರಸಾರ ಮಾಡುವುದರಿಂದ ನ್ಯಾಯಾಂಗದ ಮೇಲಿನ ಸಾರ್ವಜನಿಕ ನಂಬಿಕೆಗೆ ಧಕ್ಕೆಯಾಗುತ್ತಿದೆ ಎಂದೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries