HEALTH TIPS

ಮಣಿಪುರ | ಮತ್ತೆ ಭುಗಿಲೆದ್ದ ಹಿಂಸಾಚಾರ : ಕನಿಷ್ಠ 29 ಮನೆಗಳಿಗೆ ಬೆಂಕಿ

 ಇಂಫಾಲ: ಭಾರತ-ಮ್ಯಾನ್ಮಾರ್ ಗಡಿ ಸಮೀಪವಿರುವ ಮಣಿಪುರದ ಕುಕಿ ಮತ್ತು ತಂಗ್ಖುಲ್ ನಾಗಾ ಗ್ರಾಮಗಳಲ್ಲಿ ಬುಧವಾರ ನಡೆದ ಪ್ರತ್ಯೇಕ ಘಟನೆಗಳಲ್ಲಿ ಕನಿಷ್ಠ 29 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಅಸ್ಸಾಂ ರೈಫಲ್ಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 


ಕಾಮ್‌ಜಾಂಗ್ ಜಿಲ್ಲೆಯ ಕುಕಿ ಗ್ರಾಮವಾದ ಫೈಮೋಲ್‌ನಲ್ಲಿ ಮಧ್ಯಾಹ್ನ 12.30ರ ಸುಮಾರಿಗೆ ಅಪರಿಚಿತ ವ್ಯಕ್ತಿಗಳು ಎಲ್ಲಾ 15 ಮನೆಗಳಿಗೆ ಬೆಂಕಿ ಹಚ್ಚಿದರು ಎಂದು ಪೊಲೀಸರು ತಿಳಿಸಿದರು.

ಭದ್ರತಾ ಕಾರಣಗಳಿಂದಾಗಿ ಈ ಗ್ರಾಮವನ್ನು ಈಗಾಗಲೇ ಖಾಲಿ ಮಾಡಲಾಗಿತ್ತು. ಇಲ್ಲಿನ ನಿವಾಸಿಗಳು ತಾತ್ಕಾಲಿಕವಾಗಿ ಅಸ್ಸಾಂ ರೈಫಲ್ಸ್ ಶಿಬಿರವಿರುವ ಐಶಿ ಗ್ರಾಮದಲ್ಲಿ ನೆಲೆಸಿದ್ದಾರೆ.

ಮಧ್ಯಾಹ್ನ 1:45ರ ಸುಮಾರಿಗೆ, ಕಾಮ್‌ಜಾಂಗ್ ಜಿಲ್ಲೆಯ ತಂಗ್ಖುಲ್ ನಾಗಾ ಗ್ರಾಮ ಶಾಂಗ್ಖಲೋಕ್‌ಗೆ ಶಸ್ತ್ರಸಜ್ಜಿತರಾಗಿ ಬಂದ ವ್ಯಕ್ತಿಗಳು ಬೆಂಕಿ ಹಚ್ಚಿದ್ದಾರೆ. ಇದನ್ನು ಪ್ರತೀಕಾರದ ದಾಳಿ ಎಂಬುದಾಗಿ ಅಧಿಕಾರಿಗಳು ಬಣ್ಣಿಸಿದ್ದಾರೆ. ಸುಮಾರು ಏಳು ಮನೆಗಳು ಭಾಗಶಃ ಸುಟ್ಟುಹೋಗಿವೆ.

ಮೂರನೇ ಘಟನೆಯಲ್ಲಿ, ಕಾಮ್‌ಜಾಂಗ್ ಜಿಲ್ಲೆಯ ಶಾಂಗ್ಖಲೋಕ್ ಮತ್ತು ಫೈಕೋಹ್ ನಡುವಿನ ತಂಗ್ಖುಲ್ ನಾಗಾ ಗ್ರಾಮ ಹುಯಿಮೈನ್ ಥಾನಾದಲ್ಲಿ ಸುಮಾರು ಏಳು ಮನೆಗಳಿಗೆ ಕುಕಿ ಉಗ್ರರು ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಗಳಲ್ಲಿ ಸಾವು-ನೋವು ಸಂಭವಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ನಾಲ್ಕನೇ ಘಟನೆ ಗುರುವಾರ ಬೆಳಗ್ಗೆ ನೋನಿ ಜಿಲ್ಲೆಯ ಲೀಕೋಟ್ ಎಂಬ ಕುಕಿ ಗ್ರಾಮದಲ್ಲಿ ನಡೆದಿದೆ ಎಂದು ಕುಕಿ ಸಮುದಾಯದ ಉನ್ನತ ಸರ್ವೋಚ್ಚ ಸಂಘಟನೆ 'ಕುಕಿ ಇನ್ಪಿ ಮಣಿಪುರ' ತಿಳಿಸಿದೆ. ನಾಗಾ ಉಗ್ರರು ಬೆಳಗಿನ ಜಾವ 5 ಗಂಟೆಯ ಸುಮಾರಿಗೆ ಸ್ವಯಂಚಾಲಿತ ಶಸ್ತ್ರಾಸ್ತ್ರಗಳೊಂದಿಗೆ ಲೀಕೋಟ್ ಮೇಲೆ ದಾಳಿ ಮಾಡಿ, ನಂತರ ಗ್ರಾಮಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಕುಕಿ ಸಂಘಟನೆ ಆರೋಪಿಸಿದೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries