HEALTH TIPS

ನೀಟ್‌/ಜೆಇಇ: ಬೋರ್ಡ್‌ ಪರೀಕ್ಷೆಗೆ ಶೇ 50ರಷ್ಟು ವೇಟೇಜ್‌

 ನವದೆಹಲಿ: ವೈದ್ಯಕೀಯ, ಎಂಜಿನಿಯರಿಂಗ್‌ ಕೋರ್ಸ್‌ಗಳ ಪ್ರವೇಶಕ್ಕೆ ನಡೆಯುವ ನೀಟ್‌/ಜೆಇಇ ಪರೀಕ್ಷೆಗೆ ಶೇ 50 ಮತ್ತು ಬೋರ್ಡ್‌ ಪರೀಕ್ಷೆಗೆ ಶೇ 50ರಷ್ಟು 'ವೇಟೇಜ್‌' ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. 


ಪ್ರಶ್ನೆಪತ್ರಿಕೆ ಸೋರಿಕೆ, ಮೌಲ್ಯಮಾಪನ ದೋಷ ಸೇರಿದಂತೆ ಹಲವು ಬಗೆಯ ಅಕ್ರಮಗಳಿಂದ ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಶಿಕ್ಷಣ ಸಚಿವಾಲಯ ಈ ಕುರಿತು ಯೋಜಿಸುತ್ತಿದೆ ಎಂದು ಗೊತ್ತಾಗಿದೆ.

ನೀಟ್‌/ಜೆಇಇ ಮೆರಿಟ್‌ ಮಾಪನದ ವೇಳೆ ಬೋರ್ಡ್‌ ಪರೀಕ್ಷೆಯ ಶೇ 50ರಷ್ಟು ಅಂಕಗಳನ್ನೂ ಗಣನೆಗೆ ತೆಗೆದುಕೊಳ್ಳುವುದರಿಂದ ಕೋಚಿಂಗ್‌ ಕೇಂದ್ರಗಳ ಮೇಲಿನ ಅವಲಂಬನೆ ಕಡಿಮೆ ಆಗುತ್ತದೆ. ಅಲ್ಲದೆ ಕೆಲ ವಿದ್ಯಾರ್ಥಿಗಳು ಹಲವು ಬಾರಿ ಈ ಪ್ರವೇಶ ಪರೀಕ್ಷೆಗಳನ್ನು ಬರೆಯುವುದೂ ತಪ್ಪುತ್ತದೆ ಎಂದು ಮೂಲಗಳು ತಿಳಿಸಿವೆ.

ಪ್ರಸ್ತತ, ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ ಕೋರ್ಸ್‌ಗಳ ಪ್ರವೇಶಾತಿ ಪ್ರಕ್ರಿಯೆಯು ಪ್ರವೇಶ ಪರೀಕ್ಷೆಗಳಲ್ಲಿ ಪಡೆಯುವ ಅಂಕಗಳನ್ನು ಆಧರಿಸಿವೆ. ಜತೆಗೆ ಅಭ್ಯರ್ಥಿಗಳು ಬೋರ್ಡ್‌ ಪರೀಕ್ಷೆಗಳಲ್ಲಿ ನಿರ್ದಿಷ್ಟ ಅರ್ಹತಾ ಅಂಕಗಳನ್ನು ಪಡೆದಿರಬೇಕು ಎಂಬ ನಿಯಮವೂ ಇದೆ.

ಕೋಚಿಂಗ್‌ ಕೇಂದ್ರಗಳ ಅವಲಂಬನೆ ಕಡಿಮೆಗೊಳಿಸುವ ಮತ್ತು 'ಡಮ್ಮಿ ಶಾಲೆಗಳ' ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಳೆದ ವರ್ಷ ಶಿಕ್ಷಣ ಸಚಿವಾಲಯ ರಚಿಸಿದ್ದ ಒಂಬತ್ತು ಸದಸ್ಯರ ಸಮಿತಿ ಈ ಸುಧಾರಣೆಗಳ ಶಿಫಾರಸ್ಸಿಗೆ ಮುಂದಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸಮಿತಿಯು ಸದ್ಯದಲ್ಲಿಯೇ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆಯಿದ್ದು, ಶಾಲಾ ಪಠ್ಯಕ್ರಮದ ಜತೆಗೆ ಪ್ರವೇಶ ಪರೀಕ್ಷೆಗಳನ್ನು ಜೋಡಿಸಲು ಶಿಫಾರಸು ಮಾಡುವ ಸಾಧ್ಯತೆಯಿದೆ ಎಂದೂ ಗೊತ್ತಾಗಿದೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries