ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಗುರುವಾರ ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ. ಪಕ್ಷದ ಕೇಂದ್ರ ತಂಡವನ್ನು ಪುನರ್‌ರಚಿಸಲಾಗುತ್ತಿದೆ ಎಂಬ ಚರ್ಚೆಗಳು ನಡೆಯುತ್ತಿರುವ ಕಾರಣ, ಈ ಭೇಟಿಗೆ ಮಹತ್ವ ಬಂದಿದೆ.
ಶಾ ಅವರ ನಿವಾಸದಲ್ಲಿ ಮೂರು ಗಂಟೆ ನಡೆದ ಈ ಸಭೆಯಲ್ಲಿ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ(ಸಂಘಟನೆ) ಬಿ.ಎಲ್.ಸಂತೋಷ್ ಕೂಡ ಉಪಸ್ಥಿತರಿದ್ದರು ಎಂದು ಮೂಲಗಳು ಹೇಳಿವೆ.
'ನಿತಿನ್ ನವೀನ್ ನೇತೃತ್ವದ ಹೊಸ ತಂಡವು ಅನುಭವಿ ಹಿರಿಯ ನಾಯಕರು ಹಾಗೂ ಯುವ ಮುಖಂಡರನ್ನು ಒಳಗೊಂಡಿರುವ ನಿರೀಕ್ಷೆ ಇದೆ. ಕೆಲವರಿಗೆ ಸಚಿವ ಹುದ್ದೆಗಳಿಂದ ಬಿಡುಗಡೆ ಮಾಡಿ, ಪಕ್ಷ ಸಂಘಟನೆ ಜವಾಬ್ದಾರಿ ನೀಡುವ ಸಾಧ್ಯತೆ ಇದೆ. ಪಕ್ಷದ ಹೊಸ ತಂಡದ ಭಾಗವಾಗಲಿರುವವರ ಹೆಸರುಗಳನ್ನು ಶೀಘ್ರವೇ ಘೋಷಿಸಲಾಗುತ್ತದೆ' ಎಂದು ಇವೇ ಮೂಲಗಳು ಹೇಳಿವೆ.

