HEALTH TIPS

64 ತಂಡಗಳ ವಿಶ್ವಕಪ್ | FIFA ಅಧ್ಯಕ್ಷ ಗಿಯಾನಿ ಹೇಳಿದ್ದೇನು?

2026ರ ವಿಶ್ವಕಪ್ ಪಂದ್ಯಾವಳಿಯ ನಂತರ ಮುಂದಿನ ವಿಶ್ವಕಪ್ ನಲ್ಲಿ ತಂಡಗಳ ಸಂಖ್ಯೆಯನ್ನು 64ಕ್ಕೆ ಏರಿಸುವ ಬಗ್ಗೆ FIFA ಚರ್ಚಿಸಲಿದೆ ಎಂದು FIFA ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ದೃಢಪಡಿಸಿದ್ದಾರೆ.

ಫುಟ್ಬಾಲ್ ನ ಅತಿದೊಡ್ಡ ಈವೆಂಟ್ನಲ್ಲಿ ಆಡುವ ಕನಸು ಕಾಣುವ ಅವಕಾಶವನ್ನು ಪ್ರತಿ ರಾಷ್ಟ್ರವೂ ಹೊಂದಿರಬೇಕು ಎಂದು ಅವರು ಹೇಳಿದರು.

ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊಗಳಲ್ಲಿ ಆಯೋಜನೆಯಾಗಿರುವ 2026ರ ವಿಶ್ವಕಪ್ ನಲ್ಲಿ ಮೊತ್ತ ಮೊದಲ ಬಾರಿಗೆ FIFA 48 ತಂಡಗಳನ್ನು ಆಡಿಸಿದೆ. ಅದಕ್ಕೆ ಮೊದಲು 32 ತಂಡಗಳಷ್ಟೇ ಆಡುತ್ತಿದ್ದವು. ಇದೀಗ ಮುಂದಿನ ಪಂದ್ಯಾವಳಿಗೆ ಇನ್ನಷ್ಟು ತಂಡಗಳನ್ನು ಸೇರಿಸಿಕೊಳ್ಳಲು FIFA ಉದ್ದೇಶಿಸಿದೆ.

"ಈ ವಿಚಾರವಾಗಿ ಈ ವಿಶ್ವಕಪ್ ನ ನಂತರ ಸಂಬಂಧಿತ ಸಮಿತಿಗಳಲ್ಲಿ ಚರ್ಚಿಸಲಾಗುವುದು. ನೀವು ವಿಶ್ವಕಪ್ ಆಯೋಜಿಸುವಾಗ ಅದನ್ನು ಇಡೀ ಜಗತ್ತಿಗೆ ಆಯೋಜಿಸಬೇಕಾಗುತ್ತದೆ. ಯುರೋಪ್ ಮತ್ತು ದಕ್ಷಿಣ ಅಮೆರಿಕ ಮಾತ್ರವಲ್ಲ, ಇಡೀ ಜಗತ್ತಿಗೆ ಸೇರುವ ಪಂದ್ಯಾವಳಿಯಾಗಬೇಕು. ಪ್ರತಿ ರಾಷ್ಟ್ರವೂ ವಿಶ್ವಕಪ್ ನಲ್ಲಿ ಭಾಗವಹಿಸುವ ಕನಸು ಕಾಣಲು ಸಾಧ್ಯವಾಗಬೇಕು. ಈಗಿನ ವಿಶ್ವಕಪ್ ಮುಗಿದ ನಂತರ FIFA ಪಂದ್ಯಾವಳಿಯನ್ನು 64 ತಂಡಗಳಿಗೆ ವಿಸ್ತರಿಸುವತ್ತ ಗಮನಹರಿಸಲಿದೆ" ಎಂದು ಗಿಯಾನಿ ತಿಳಿಸಿದರು.

"ತಂಡಗಳ ಗುಣಮಟ್ಟ ಅತ್ಯಂತ ಹೆಚ್ಚಿರುವುದನ್ನು ನಾವು ಗಮನಿಸಬಹುದು. ವಿಶ್ವಾದ್ಯಂತ ಗುಣಮಟ್ಟ ಹೆಚ್ಚುತ್ತಿದೆ. ಸಣ್ಣ ದೇಶಗಳಿಗೆ ವಿಶ್ವಕಪ್ ನಲ್ಲಿ ಭಾಗವಹಿಸಲು ಅವಕಾಶ ನೀಡದಿದ್ದರೆ ಅವು ಸುಧಾರಿಸಲು ಇರುವ ಪ್ರೋತ್ಸಾಹವನ್ನು ಕಳೆದುಕೊಳ್ಳುತ್ತವೆ" ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

64 ತಂಡಗಳು ವಿಶ್ವಕಪ್ ಆಡುವ ಕಲ್ಪನೆಯನ್ನು ಪ್ರಥಮ ಬಾರಿಗೆ 2025ರ ಮಾರ್ಚ್ ನಲ್ಲಿ ಚರ್ಚಿಸಲಾಗಿತ್ತು. 2030ರ ಪಂದ್ಯಾವಳಿಯನ್ನು ವಿಸ್ತರಿಸುವುದನ್ನು ದಕ್ಷಿಣ ಅಮೆರಿಕದ ಒಕ್ಕೂಟ CONMEBOL ಪ್ರಸ್ತಾಪಿಸಿತ್ತು. 2030ರ ಪಂದ್ಯಾವಳಿಯು 1930ರಲ್ಲಿ ಆರಂಭವಾದ ಫುಟ್ಬಾಲ್ ವಿಶ್ವಕಪ್ ನ ಶತಮಾನೋತ್ಸವ ವರ್ಷವಾಗಿರುತ್ತದೆ.

24ನೇ ವಿಶ್ವಕಪ್ ಕುರಿತು ಸೆಪ್ಟೆಂಬರ್ ನಲ್ಲಿ ಗಿಯಾನಿ, CONMEBOL ಅಧ್ಯಕ್ಷ ಡೊಮಿಂಗ್ಯೂಜ್, ಅರ್ಜೆಂಟೀನಾ ಮತ್ತು ಉರುಗ್ವೆಯ ಫುಟ್ಬಾಲ್ ಸಂಘಗಳ ಅಧ್ಯಕ್ಷರು ಹಾಗೂ ಪರಾಗ್ವೆ ಮತ್ತು ಉರುಗ್ವೆಯ ಅಧ್ಯಕ್ಷರನ್ನು ನ್ಯೂಯಾರ್ಕ್ ನಲ್ಲಿ ಭೇಟಿಯಾಗಿ ವಿಶ್ವಕಪ್ ನಲ್ಲಿ ತಂಡಗಳನ್ನು ವಿಸ್ತರಿಸುವ ಕುರಿತು ಚರ್ಚಿಸಿದ್ದಾರೆ. ಆ ಸಂದರ್ಭದಲ್ಲಿ ಡೊಮಿಂಗ್ಯೂಜ್, "ನಾವು ಐತಿಹಾಸಿಕ 2030 ವಿಶ್ವಕಪ್ ನಲ್ಲಿ ನಂಬಿಕೆ ಇಡುತ್ತೇವೆ. ಏಕತೆ, ಸೃಜನಶೀಲತೆ ಮತ್ತು ದೊಡ್ಡ ನಂಬಿಕೆಗೆ ಕರೆ ನೀಡಲು ಬಯಸುತ್ತೇವೆ. ಫುಟ್ಬಾಲ್ ಅನ್ನು ಎಲ್ಲರೂ ಹಂಚಿಕೊಂಡಾಗ ಆಚರಣೆ ನಿಜವಾಗಿಯೂ ಜಾಗತಿಕವಾಗಿರುತ್ತದೆ" ಎಂದು ಅಭಿಪ್ರಾಯಪಟ್ಟರು.

ಆದರೆ CONCACAF (Confederation of North, Central America and Caribbean Association Football) ಅಧ್ಯಕ್ಷ ವಿಕ್ಟರ್ ಮೊಂಟಗ್ಲಿಯಾನಿ ಅವರು ವಿಶ್ವಕಪ್ ಅನ್ನು 64 ತಂಡಗಳಿಗೆ ವಿಸ್ತರಿಸುವ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದರು. "ಇಂತಹ ನಡೆ ಪಂದ್ಯಾವಳಿಗೆ ಮತ್ತು ವಿಸ್ತರಿತ ಫುಟ್ಬಾಲ್ ಪರಿಸರ ವ್ಯವಸ್ಥೆ, ರಾಷ್ಟ್ರೀಯ ತಂಡಗಳಿಂದ ತೊಡಗಿ ಕ್ಲಬ್ ಸ್ಪರ್ಧೆಗಳವರೆಗೆ, ಲೀಗ್ಗಳು ಮತ್ತು ಆಟಗಾರರಿಗೆ ಸರಿಯಾದ ಕ್ರಮವಲ್ಲ" ಎಂದು ಅವರು ಹೇಳಿದ್ದರು. ಯುರೋಪ್ ಫುಟ್ಬಾಲ್ ಸಂಘಟನೆ UEFA ಅಧ್ಯಕ್ಷ ಅಲೆಕ್ಸಾಂಡರ್ ಸೆಫರಿನ್ ಅವರೂ ಪಂದ್ಯಾವಳಿಯ ವಿಸ್ತರಣೆಯ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

64 ತಂಡಗಳ ವಿಶ್ವಕಪ್ ಗೆ ಅನುಮೋದನೆ ದೊರೆತರೆ 128 ಪಂದ್ಯಗಳನ್ನು ಆಯೋಜಿಸಬೇಕಾಗುತ್ತದೆ. ಈ ವರ್ಷದ ಪಂದ್ಯಾವಳಿಯಲ್ಲಿ 104 ಪಂದ್ಯಗಳನ್ನು ಆಯೋಜಿಸಲಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries