HEALTH TIPS

ಇರಾನ್‍ನ `ಐಆರ್‌ಜಿಸಿ'ಯನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲು ಬ್ರಿಟನ್ ನಿರ್ಧಾರ

 ಲಂಡನ್: ರಾಷ್ಟ್ರೀಯ ಭದ್ರತೆಗೆ ಬೆದರಿಕೆಯೊಡ್ಡಿರುವ ಇರಾನ್‍ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾಪ್ರ್ಸ್ (ಐಆರ್‍ಜಿಸಿ) ಅನ್ನು ನಿಷೇಧಿಸುವ ಯೋಜನೆಗಳನ್ನು ಬ್ರಿಟನ್ ಸರಕಾರ ಸೋಮವಾರ ಪ್ರಕಟಿಸಿದೆ. ಇದರೊಂದಿಗೆ ಯಹೂದಿ ಸಮುದಾಯದ ಮೇಲಿನ ಸರಣಿ ದಾಳಿಗಳ ಆರೋಪ ಹೊತ್ತಿರುವ ಇರಾನ್-ಸಂಯೋಜಿತ ಗುಂಪನ್ನು ಸಹ ನಿಷೇಧಿಸಲು ನಿರ್ಧರಿಸಲಾಗಿದೆ.


ಈ ಗುಂಪುಗಳನ್ನು ಬೆಂಬಲಿಸುವ ಅಥವಾ ಅವರಿಗೆ ಸಹಾಯ ಮಾಡುವ ಯಾವುದೇ ವ್ಯಕ್ತಿ ಈಗ 14 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಪ್ರಧಾನಿ ಕೀರ್ ಸ್ಟಾರ್ಮರ್ ಈ ವಾರ ಸಂಸತ್ತಿನಲ್ಲಿ ಮಂಡಿಸಲಿರುವ ಪ್ರಸ್ತಾವಿತ ಕಾಯ್ದೆಯ ಬಗ್ಗೆ ತಿಳಿಸಿದ್ದಾರೆ.

ನಿಷೇಧಿತ ಗುಂಪುಗಳಲ್ಲಿ ರಶ್ಯದ ಜಿಆರ್‍ಯು ಮಿಲಿಟರಿ ಗುಪ್ತಚರ ಸಂಸ್ಥೆಯ ಪ್ರತಿನಿಧಿಗಳು, ಹಾಗೂ ಲಂಡನ್‍ನಲ್ಲಿ ಯಹೂದಿ ಆಸ್ತಿಗಳ ಮೇಲಿನ ದಾಳಿಯ ಹೊಣೆ ಹೊತ್ತಿರುವ ಇರಾನ್-ಸಂಯೋಜಿತ ಗುಂಪಾದ ಇಸ್ಲಾಮಿಕ್ ಮೂವ್‍ಮೆಂಟ್ ಆಫ್ ಕಂಪ್ಯಾನಿಯನ್ಸ್ ಆಫ್ ದಿ ರೈಟ್ (ಐಎಂಸಿಆರ್) ಸೇರಿವೆ.

ಬ್ರಿಟನ್‍ನ ರಾಷ್ಟ್ರೀಯ ಭದ್ರತೆಗೆ ಬೆದರಿಕೆಯೆಂದು ಪರಿಗಣಿಸಲಾದ ವಿದೇಶಿ ದೇಶಗಳ ಪ್ರತಿನಿಧಿಗಳನ್ನು ನಿರ್ಬಂಧಿಸಲು ಈ ಹೊಸ ಕಾನೂನು ಬ್ರಿಟಿಷ್ ಸರಕಾರಕ್ಕೆ `ನಿಷೇಧದಂತಹ ಅಧಿಕಾರಗಳನ್ನು ನೀಡುತ್ತದೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries