HEALTH TIPS

ಅಮೆರಿಕ ಹಾರ್ಮುಝ್ ಜಲಸಂಧಿಯ `ರಕ್ಷಕ' ಆಗಲಿದೆ : ಡೊನಾಲ್ಡ್ ಟ್ರಂಪ್

 ವಾಶಿಂಗ್ಟನ್ : ಅಮೆರಿಕ ಹಾರ್ಮುಝ್ ಜಲಸಂಧಿಯ ರಕ್ಷಕ ಆಗಲಿದೆ. ಜಲಮಾರ್ಗದ ಮೂಲಕ ಸಾಗಣೆಯಾಗುವ ಎಲ್ಲಾ ಸರಕುಗಳ ಮೇಲೆ ಭದ್ರತೆ ಒದಗಿಸುವ ಪರಿಹಾರವಾಗಿ ಶೇಕಡಾ 20 ರಷ್ಟು ಶುಲ್ಕವನ್ನು ವಿಧಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಘೋಷಿಸಿದ್ದಾರೆ.


ಜೊತೆಗೆ, ಇರಾನ್ ನೌಕಾ ದಿಗ್ಬಂಧನವನ್ನು ಮರುಜಾರಿಗೊಳಿಸುವುದಾಗಿ ಪ್ರಕಟಿಸಿದ್ದಾರೆ. `ಹಾರ್ಮುಝ್ ಜಲಸಂಧಿಯು ಮುಕ್ತವಾಗಿದೆ ಮತ್ತು ಇರಾನ್ ಇರಲಿ ಅಥವಾ ಇಲ್ಲದಿರಲಿ ಅದು ಮುಕ್ತವಾಗಿಯೇ ಇರುತ್ತದೆ. ನಾವು ಇರಾನ್ ದಿಗ್ಬಂಧನವನ್ನು ಮರುಜಾರಿಗೊಳಿಸುತ್ತಿದ್ದೇವೆ. ಇತರ ಎಲ್ಲಾ ದೇಶಗಳು ಜಲಸಂಧಿಯನ್ನು ನ್ಯಾಯಯುತವಾಗಿ ಮತ್ತು ಮುಕ್ತವಾಗಿ ಬಳಸಬಹುದು. ಅಮೆರಿಕ ಇನ್ನು ಮುಂದೆ `ಹಾರ್ಮುಝ್ ಜಲಸಂಧಿಯ ರಕ್ಷಕ ಎಂದು ಕರೆಯಲ್ಪಡುತ್ತದೆ. ಆದರೆ ಆ ನಿಟ್ಟಿನಲ್ಲಿ, ಪ್ರಪಂಚದ ಈ ಅತ್ಯಂತ ಅಸ್ಥಿರ ಪ್ರದೇಶಕ್ಕೆ ಸುರಕ್ಷತೆ ಮತ್ತು ಭದ್ರತೆಯನ್ನು ಒದಗಿಸುವ ವೆಚ್ಚಗಳ ಮರುಪಾವತಿಯಾಗಿ, ಸಾಗಣೆಯಾಗುವ ಎಲ್ಲಾ ಸರಕುಗಳ ಮೇಲೆ 20% ದರದಲ್ಲಿ ಶುಲ್ಕವನ್ನು ವಸೂಲಿ ಮಾಡಲಾಗುತ್ತದೆ' ಎಂದು ಟ್ರಂಪ್ ತಮ್ಮ `ಟ್ರುಥ್ ಸೋಷಿಯಲ್' ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries