HEALTH TIPS

ಕಾಂಗೋ ಗಣರಾಜ್ಯದಲ್ಲಿ ಎಬೋಲಾ ಪ್ರಕರಣ; 700ಕ್ಕೂ ಹೆಚ್ಚು ಮೃತ್ಯು: ವರದಿ

 ಬುನಿಯಾ ,ಕಿನ್ಶಾಸಾ: ಎಬೋಲಾ ಪ್ರಕರಣಗಳಿಂದ ಇಲ್ಲಿಯವರೆಗೆ 702 ಜನರು ಸಾವನ್ನಪ್ಪಿದ್ದಾರೆ ಎಂದು ಕಾಂಗೋ ಗಣರಾಜ್ಯದ ಅಧಿಕಾರಿಗಳು ತಿಳಿಸಿದ್ದಾರೆ. ಪೂರ್ವ ಕಾಂಗೋದಲ್ಲಿ ವರದಿಯಾಗುತ್ತಿರುವ ಶೇಕಡಾ 80 ರಷ್ಟು ಹೊಸ ಎಬೋಲಾ ಪ್ರಕರಣಗಳು ಅಪರಿಚಿತ ಮೂಲಗಳಿಂದ ಹರಡುತ್ತಿವೆ . 


ಇದು ಸೋಂಕು ಅಧಿಕಾರಿಗಳು ಪತ್ತೆ ಹಚ್ಚುವುದಕ್ಕಿಂತಲೂ ವೇಗವಾಗಿ ಹರಡುತ್ತಿರುವುದರ ಸಂಕೇತವಾಗಿದೆ ಎಂದು ವಿಶ್ವ ಸಂಸ್ಥೆಯ ಆರೋಗ್ಯ ಸಂಸ್ಥೆ ತಿಳಿಸಿದೆ.

ಇತುರಿ ಪ್ರಾಂತ್ಯದ ಬೂನಿಯಾದಲ್ಲಿ ಅತಿ ಹೆಚ್ಚು ಸೋಂಕಿತರು ಕಂಡುಬಂದಿದ್ದಾರೆ. ಈವರೆಗೆ ಕಾಂಗೋದ ಮೂರು ಪ್ರಾಂತ್ಯಗಳಲ್ಲಿ ವೈರಸ್ನಿಂದ ಕನಿಷ್ಠ 1,926 ಜನರು ಸೋಂಕಿಗೆ ಒಳಗಾಗಿದ್ದು, ಅವರಲ್ಲಿ 702 ಜನರು ಸಾವನ್ನಪ್ಪಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಆಫ್ರಿಕಾ ರೋಗ ನಿಯಂತ್ರಣ ಕೇಂದ್ರ (ಸಿಡಿಸಿ ಆಫ್ರಿಕಾ) , ಯಾವುದೇ ಅನುಮೋದಿತ ಚಿಕಿತ್ಸೆ ಅಥವಾ ಲಸಿಕೆ ಇಲ್ಲದ ಅಪರೂಪದ ತಳಿಯ ಎಬೋಲಾ ಸೋಂಕಿನ ವಿರುದ್ಧ ಕಾಂಗೋ ಮೇ ತಿಂಗಳಿನಿಂದ ಹೋರಾಡುತ್ತಿದೆ. ಇದು ಆಫ್ರಿಕಾ ಖಂಡದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಎಬೋಲಾ ಸೋಂಕು ಎಂದು ಹೇಳಿದೆ.

ಚಿಕ್ವೆ ಇಹೆಕ್ವೀಜು ಭೇಟಿ

ವಿಶ್ವ ಆರೋಗ್ಯ ಸಂಸ್ಥೆಯ ಆರೋಗ್ಯ ತುರ್ತು ಪರಿಸ್ಥಿತಿಗಳ ಕಾರ್ಯಕ್ರಮದ ಕಾರ್ಯನಿರ್ವಾಹಕ ನಿರ್ದೇಶಕರಾದ ಚಿಕ್ವೆ ಇಹೆಕ್ವೀಜು ಅವರು ಅತಿ ಹೆಚ್ಚು ಹಾನಿಗೊಳಗಾದ ನಗರಗಳಲ್ಲಿ ಒಂದಾದ ಇತುರಿ ಪ್ರಾಂತ್ಯದ ಬೂನಿಯಾ ಗೆ ಇತ್ತೀಚೆಗೆ ಭೇಟಿ ನೀಡಿದ್ದರು. ಬಳಿಕ ಮಾತನಾಡಿದ ಅವರು,"ಅತ್ಯಂತ ಆತಂಕಕಾರಿ ಸಂಗತಿಯೆಂದರೆ, ಹೊಸದಾಗಿ ವರದಿಯಾದ ಸಾವುಗಳಲ್ಲಿ ಹಲವರು ಯಾವುದೇ ಆರೋಗ್ಯ ಕೇಂದ್ರವನ್ನು ತಲುಪದೆ ಮತ್ತು ಚಿಕಿತ್ಸೆ ಪಡೆಯದೆ ತಮ್ಮ ಸಮುದಾಯಗಳಲ್ಲೇ ಸಾವನ್ನಪ್ಪಿದವರಾಗಿದ್ದಾರೆ. ಮಾಹಿತಿಯ ಪ್ರಕಾರ, ಶೇಕಡಾ 80 ರಷ್ಟು ಹೊಸ ಪ್ರಕರಣಗಳು ನಮ್ಮ ಸಂಪರ್ಕ ಪಟ್ಟಿಯಿಂದ ಹೊರಗಿವೆ ಮತ್ತು ಹೀಗಾಗಿ ಅಪರಿಚಿತ ಮೂಲಗಳಿಂದ ನಮ್ಮ ಬಳಿಗೆ ಬರುತ್ತಿವೆ" ಎಂದಿದ್ದಾರೆ.

ಈ ಸೋಂಕು ನಿಯಂತ್ರಣ ಪ್ರಯತ್ನಗಳನ್ನೂ ಮೀರಿ ಮುನ್ನುಗ್ಗುತ್ತಿದೆ ಎಂದು ಇಹೆಕ್ವೀಜು ಹೇಳಿದ್ದಾರೆ.

ಬೂನಿಯಾದಲ್ಲಿ ಚಿಕಿತ್ಸಾ ಸಾಮರ್ಥ್ಯವು ಈಗ ಸುಮಾರು 800 ಹಾಸಿಗೆಗಳಿಗೆ ತಲುಪಿದ್ದು, ಪ್ರತಿ ವಾರ ಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತಿದೆ. ಅಲ್ಲದೆ ಲ್ಯಾಬ್ ಸಾಮರ್ಥ್ಯವು 1 ರಿಂದ 14 ಕ್ಕೆ ಏರಿದೆ.

ಈ ಪ್ರಯತ್ನವನ್ನು ಶ್ಲಾಘಿಸಿದ ಇಹೆಕ್ವೀಜು , "ನಮ್ಮ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ... ನಾವು ಈ ರೇಸ್ನಲ್ಲಿ ಇನ್ನೂ ಮುನ್ನಡೆ ಸಾಧಿಸಲು ಸಾಧ್ಯವಾಗಿಲ್ಲ" ಎಂದಿದ್ದಾರೆ.

ನಿಯಂತ್ರಣ ಕಾರ್ಯಾಚರಣೆಗೆ ಅಡ್ಡಿ

ಹಣಕಾಸು ಕೊರತೆ, ಆರೋಗ್ಯ ಕೇಂದ್ರಗಳ ಮೇಲಿನ ದಾಳಿಗಳು, ಪೂರ್ವ ಕಾಂಗೋದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಸ್ಥಳೀಯ ಸಮುದಾಯಗಳಲ್ಲಿನ ಅಪನಂಬಿಕೆಗಳು ನಿಯಂತ್ರಣ ಕಾರ್ಯಾಚರಣೆಗೆ ಅಡ್ಡಿಯಾಗಿವೆ ಎಂದು ಟಿಠಿಡಿ.oಡಿg ವರದಿ ಮಾಡಿದೆ.

ಈಶಾನ್ಯ ಕಾಂಗೋದ ಎಬೋಲಾ ವೈರಸ್ ಚಿಕಿತ್ಸಾ ಕೇಂದ್ರವೊಂದರಲ್ಲಿ ಡಜನ್ಗಟ್ಟಲೆ ಆರೋಗ್ಯ ಕಾರ್ಯಕರ್ತರು ವೇತನ ಮತ್ತು ಬೋನಸ್ ಪಾವತಿಸದ ಕಾರಣಕ್ಕಾಗಿ ಸೋಮವಾರ ಮುಷ್ಕರ ನಡೆಸಿದ್ದಾರೆ. ಸರ್ಕಾರವು 72 ಗಂಟೆಗಳ ಒಳಗೆ ಪಾವತಿ ಮಾಡಲಿದೆ ಎಂದು ಭರವಸೆ ನೀಡಿದ ಬಳಿಕ ತಮ್ಮ ಕೆಲಸವನ್ನು ಪುನರಾರಂಭಿಸಲು ಒಪ್ಪಿಕೊಂಡರು ಎಂದು ತಿಳಿದುಬಂದಿದೆ.

"ಕೇವಲ ಒಂದು ದಿನದ ಮುಷ್ಕರವು ಈಗಾಗಲೇ ಹಲವು ಹಾನಿಗಳನ್ನು ಉಂಟುಮಾಡಿದೆ. ರೋಗಿಗಳಿಗೆ ಕೇಂದ್ರವನ್ನು ಪ್ರವೇಶಿಸಲು ಸಾಧ್ಯವಾಗಲಿಲ್ಲ. ಭರವಸೆ ಈಡೇರದೆ ಚಿಕಿತ್ಸಾ ಕೇಂದ್ರವು ಮುಚ್ಚಲ್ಪಟ್ಟರೆ, ಸಂಭವಿಸುವ ಜೀವಹಾನಿಗೆ ಸರ್ಕಾರವೇ ಸಂಪೂರ್ಣ ಜವಾಬ್ದಾರಿಯಾಗುತ್ತದೆ" ಎಂದು ಮುಷ್ಕರ ನಿರತ ಆರೋಗ್ಯ ಕಾರ್ಯಕರ್ತರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಸೋಂಕು ಅಧಿಕೃತವಾಗಿ ಪತ್ತೆಯಾಗದೆ ವಾರಗಳ ಕಾಲ ಹರಿದಾಡಿತ್ತು. ಬಳಿಕ ಮೇ 15 ರಂದು ಹೊಸ ಎಬೋಲಾ ಸೋಂಕನ್ನು ಕಾಂಗೋ ಅಧಿಕಾರಿಗಳು ಘೋಷಿಸಿದ್ದರು. ವೈರಸ್ ವಿರುದ್ಧ ಹೋರಾಡುವ ಆಶಯದೊಂದಿಗೆ ಸಂಶೋಧಕರು ಅಧ್ಯಯನವನ್ನು ಪ್ರಾರಂಭಿಸಿದರು. ಚಿಕಿತ್ಸೆಗಾಗಿ ಕ್ಲಿನಿಕಲ್ ಪ್ರಯೋಗಗಳು ಕಳೆದ ವಾರದಿಂದ ಪ್ರಾರಂಭವಾದವು ಎಂದು ತಿಳಿದುಬಂದಿದೆ.

ಕಾಂಗೋದಲ್ಲಿ ಮಾನವೀಯ ನೆರವು ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮೇರಿಕಾ ನಾಗರಿಕರೊಬ್ಬರಿಗೆ ಎಬೋಲಾ ವೈರಸ್ ದೃಢಪಟ್ಟಿದೆ ಎಂದು ಯುಎಸ್ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ಜುಲೈ 11 ರಂದು ತಿಳಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲಾಗಿಲ್ಲ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries