HEALTH TIPS

ಪೆರಿಯ ಗೋಶಾಲೆಯಲ್ಲಿ ಜಯಂತ್ ಅವರ ಕೊಳಲ ವಾದನ


ಕಾಸರಗೋಡು
: ಬೇಕಲ ಗೋಕುಲಂ ಗೋಶಾಲೆಯಲ್ಲಿ ಪರಂಪರಾ ವಿದ್ಯಾಪೀಠದ ಆಶ್ರಯದಲ್ಲಿ ಆಷಾಢ ಏಕಾದಶಿಯ ಪ್ರಯುಕ್ತ 2 ದಿನಗಳ ಕಾಲ ನಡೆಯುತ್ತಿರುವ ನೃತ್ಯ ಗಾನ ಕಾರ್ಯಕ್ರಮಗಳಲ್ಲಿ ಶುಕ್ರವಾರ ನಡೆದ ಕೊಳಲು ಕಚೇರಿ ಗಮನಾರ್ಹವಾಗಿತ್ತು. ಮುತ್ತುಸ್ವಾಮಿ ದೀಕ್ಷಿತರ ನಾಟ ರಾಗದಲ್ಲಿನ ಮಹಾಗಣಪತಿಯಿಂದ ಕಚೇರಿ ಆರಂಭವಾಗಿ, ಹಂಸಾನಂದಿ ರಾಗದಲ್ಲಿನ ಬಂಟುರೀತಿ ಹಾಗೂ ಸ್ವಾತಿ ತಿರುನಾಳರ ಪರಿಪಾಲಯಮಾಂ, ನಂತರ ಜನರಂಜಿನಿ, ಸಾರಮತಿ, ಆಹಿರ್ ಭೌರವ್, ದರ್ಬಾರಿ ಕಾನಡ, ವನಮಾಲಿ, ಸಿಂಧು ಭೈರವಿ, ದೇಶ್ ಎಂಬ ರಾಗಗಳಲ್ಲಿನ ಕೃತಿಗಳನ್ನು ಕೊಳಲಿನಲ್ಲಿ ನುಡಿಸಿದರು. ಜಯಂತ್ ಅವರ ಶಿಷ್ಯಂದಿರಾದ ಫಣಿ ತೇಜ, ಪವನ್ ಕಲ್ಯಾಣ್, ವಿಕಾಸ್ ಕೃಷ್ಣನ್ ಅವರೂ ಕೊಳಲಿನಲ್ಲಿ ಸಹಕರಿಸಿದರು. ಕುಲೂರ್ ಜಯಚಂದ್ರ ರಾವ್ ಮೃದಂಗದಲ್ಲಿ ಮತ್ತು ಪಯ್ಯನ್ನೂರ್ ಗೋವಿಂದ ಪ್ರಸಾದ್ ಮೋರ್ಸಿಂಗ್ ಪಕ್ಕವಾದ್ಯ ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries