HEALTH TIPS

ಉಪಯೋಗಕ್ಕಿಲ್ಲದ ತಂಗುದಾಣ: ದೂರದಲ್ಲಿ ನಿಲ್ಲಿಸುವ ಬಸ್‍ಗಳಿಂದ ಪ್ರಯಾಣಿಕರಿಗೆ ಸಮಸ್ಯೆ

ಉಪ್ಪಳ: ಹೆದ್ದಾರಿ ಅಭಿವೃದ್ದಿಗೊಂಡು ಸರ್ವೀಸ್ ರಸ್ತೆಯಲ್ಲಿ ಬಸ್ ತಂಗುದಾಣ ನಿರ್ಮಿಸಿದರೂ ಅಲ್ಲಿ ಬಸ್‍ಗಳನ್ನು ನಿಲ್ಲಿಸದೆ ಅಲ್ಪ ಮುಂದೆ ನಿಲ್ಲಿಸುವುದು ಪ್ರಯಾಣಿಕರಿಗೆ ಸಮಸ್ಯೆಯನ್ನುಂಟು ಮಾಡುತ್ತಿರುವುದಾಗಿ ದೂರಲಾಗಿದೆ. 

ಬಂದ್ಯೋಡು, ನಯಬಜಾರ್, ಕೈಕಂಬ, ಹೊಸಂಗಡಿ ಸಹಿತ ಹಲವು ಕಡೆಗಳಲ್ಲಿ ಬಸ್ ತಂಗುದಾಣವನ್ನು ನಿರ್ಮಿಸಲಾಗಿದೆ. ಆದರೆ ಖಾಸಗಿ ಸಹಿತ ಸರ್ಕಾರಿ ಬಸ್‍ಗಳನ್ನು ತಂಗುದಾಣದಲ್ಲಿ ನಿಲ್ಲಿಸದೆ ಅಲ್ಪ ದೂರ ನಿಲ್ಲಿಸುತ್ತಿರುವುದರಿಂದಾಗಿ ಪ್ರಯಾಣಿಕರು ಅಲ್ಲಿ ತನಕ ಓಡಿ ಬಸ್ ಹತ್ತುವ ಅವಸ್ಥೆ ಉಂಟಾಗಿರುವುದಾಗಿ ದೂರಲಾಗಿದೆ. ಪ್ರಯಾಣಿಕರು ತಂಗುದಾಣದಲ್ಲಿ ನಿಂತರೂ ಬಸ್‍ಗಳನ್ನು ಚಾಲಕರಿಗೆ ಬೇಕಾದಲ್ಲಿ ನಿಲ್ಲಿಸಲಾಗುತ್ತಿರುವುದಾಗಿ ಪ್ರಯಾಣಿಕರು ಆರೋಪಿಸಿದ್ದಾರೆ. ಇದರಿಂದ ಬಸ್ ತಂಗುದಾಣ ಉಪಯೋಗ ಶೂನ್ಯವಾಗುತ್ತಿದೆ. ಅಲ್ಲದೆ ಬಸ್‍ಗಳನ್ನು ತಂಗುದಾಣದ ಅಲ್ಪ ಮುಂದಕ್ಕೆ ಇರುವ ಜಂಕ್ಷನ್ ಹಾಗೂ ಅಂಡರ್ ಪಾಸ್ ಹೊಂದಿರುವ ರಸ್ತೆಯಲ್ಲಿ ನಿಲ್ಲಿಸುತ್ತಿರುವುದು ಇತರ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಬಸ್‍ಗಳನ್ನು ತಂಗುದಾಣದಲ್ಲೇ ನಿಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries