HEALTH TIPS

ನಟ ಅಮೀರ್ ಖಾನ್ ಮೂರನೇ ಮದುವೆಯು 'ಲವ್ ಜಿಹಾದ್' ಎಂದ ಬಿಜೆಪಿ ಸಚಿವ

 ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ ಅವರ ಮೂರನೇ ಮದುವೆಯನ್ನು 'ಲವ್ ಜಿಹಾದ್‌' ಉದಾಹರಣೆಯನ್ನಾಗಿ ನೋಡಬಹುದೇ ಎಂದು ಬಿಜೆಪಿ ಶಾಸಕ ಮತ್ತು ಮಹಾರಾಷ್ಟ್ರ ಸಚಿವರಾಗಿರುವ ನಿತೇಶ್ ರಾಣೆ ಅವರು ಪ್ರಶ್ನಿಸಿದ್ದಾರೆ.


ಸೆಲೆಬ್ರಿಟಿಗಳು ತಮ್ಮ ವೈಯಕ್ತಿಕ ಜೀವನದಲ್ಲಿ ಇಂತಹ ನಿರ್ಧಾರಗಳನ್ನು ತೆಗೆದುಕೊಂಡಾಗ, ಹಿಂದೂ ಸಮಾಜವು ಅದರ ಬಗ್ಗೆ ಯೋಚಿಸಬೇಕು.

ಇದು ನನ್ನ ಅಭಿಪ್ರಾಯವಾಗಿದೆ ಎಂದು ಹೇಳಿದ್ದಾರೆ.

ಲವ್‌ ಜಿಹಾದ್‌ನ ರಾಯಭಾರಿ ಯಾರು? ಅಮೀರ್ ಖಾನ್ ಅಂತಹವರಾಗುತ್ತಿಲ್ಲವೇ? ಅಂತಹ ನಟರನ್ನು ದೊಡ್ಡವರನ್ನಾಗಿ ಮಾಡುವ ಮುನ್ನ, ಅವರ ಚಲನಚಿತ್ರಗಳನ್ನು ವೀಕ್ಷಿಸುವ ಹಿಂದೂ ಯುವಕರು ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು ಎಂದು ಹೇಳಿದ್ದಾರೆ.

ನಟ ಅಮೀರ್ ಖಾನ್‌ ಅವರು ಜುಲೈ 5ರಂದು ಮುಂಬೈನ ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿ ಗೌರಿ ಸ್ಪ್ರ್ಯಾಟ್ ಜೊತೆ ವಿವಾಹವಾಗಿದ್ದರು. ಇದು ಅವರ ಮೂರನೇ ಮದುವೆಯಾಗಿದೆ.

ಅಮೀರ್ ಖಾನ್ ಅವರು ಈ ಹಿಂದೆ 1986 ರಿಂದ 2002 ರವರೆಗೆ ರೀನಾ ದತ್ತಾ ಅವರೊಂದಿಗೆ ಮತ್ತು 2005 ರಿಂದ 2021 ರವರೆಗೆ ಚಲನಚಿತ್ರ ನಿರ್ಮಾಪಕಿ ಕಿರಣ್ ರಾವ್ ಅವರೊಂದಿಗೆ ದಾಂಪತ್ಯ ಜೀವನ ನಡೆಸಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries